ಮುಧೋಳ: ಮುಧೋಳದ ನಿರಾಣಿ ಉದ್ಯೋಗ ಸಮೂಹ ಸಂಸ್ಥೆ ಬಿಹಾರ ರಾಜ್ಯದ ಸೀತಾಮರಿ ನಗರದ ಹೊರವಲಯದಲ್ಲಿರುವ ರಿಗಾ ಸಕ್ಕರೆ ಕಾರ್ಖಾನೆಯನ್ನು ಖರೀದಿಸಿದೆ.
ಡಿಸೆಂಬರ್ 26ರಂದು ಕಾರ್ಖಾನೆಯ ವಿಸ್ತರಣಾ ಕಾರ್ಯಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ.
ರಿಗಾ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಸಾಮರ್ಥ್ಯವನ್ನು 10 ಸಾವಿರ ಟನ್ ವರೆಗೆ, ವಿದ್ಯುತ್ ಉತ್ಪಾದನೆ ಘಟಕವನ್ನು 50 ಮೆಗಾ ವ್ಯಾಟ್ ಗೆ, ಡಿಸ್ಟಿಲರಿ ಘಟಕವನ್ನು 545 ಕೆ.ಎಲ್.ಪಿ.ಡಿ.ಗೆ ವಿಸ್ತರಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಮುಚ್ಚಿದ ರಿಗಾ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿ ಒಂದೇ ವರ್ಷದಲ್ಲಿ ವಿಸ್ತರಣಾ ಕಾರ್ಯ ಕೈಗೊಂಡಿರುವುದಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದ್ದಾರೆ.