ಶಾಲೆಗೆ ಚಕ್ಕರ್ ಹಾಕಿ ಬೆಟ್ಟದಲ್ಲಿ ತಿರುಗಾಡುವಾಗ ವಿಷಕಾರಿ ಬೀಜ ತಿಂದ ಐವರು ಮಕ್ಕಳು ಅಸ್ವಸ್ಥ

ಬಾಗಲಕೋಟೆ: ಬಾದಾಮಿ ಎಂದು ತಿಳಿದು ವಿಷಕಾರಿ ಬೀಜ ತಿಂದ ಐವರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ತೇರದಾಳ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಐವರು ಮಕ್ಕಳು ರಬಕವಿ -ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿರುವ ಭದ್ರಗಿರಿ ಬೆಟ್ಟದಲ್ಲಿ ಆಟವಾಡಿದ್ದಾರೆ.

ಶಾಲೆಗೆ ಚಕ್ಕರ್ ಹಾಕಿ ಬೆಟ್ಟದಲ್ಲಿ ತಿರುಗಾಡುವ ವೇಳೆ ಅಲ್ಲೇ ಇದ್ದ ಗಿಡವೊಂದರ ಬೀಜಗಳನ್ನು ಬಾದಾಮಿ ಬೀಜ ಎಂದು ತಿಳಿದು ತಿಂದಿದ್ದಾರೆ. ವಿಷಕಾರಿ ಬೀಜ ತಿಂದ ನಂತರ ಮಕ್ಕಳು ಅಸ್ವಸ್ಥರಾಗಿದ್ದು ಮಾಹಿತಿ ತಿಳಿದ ವಾರ್ಡನ್ ವಸಂತ ಹಿರೇಮಠ ಮಕ್ಕಳನ್ನು ರಕ್ಷಿಸಿ ಜಮಖಂಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read