ವಿಶ್ವದಲ್ಲೇ ಫಸ್ಟ್ ಟೈಮ್; ಯುಕೆಯಲ್ಲಿ ಲಾಲಾರಸ ಗರ್ಭಧಾರಣೆ ಪರೀಕ್ಷೆ ಆರಂಭ

ಮಹಿಳೆಯರ ಲಾಲಾರಸ ಬಳಸಿಕೊಂಡು ಮಹಿಳೆಯರು  ಗರ್ಭಿಣಿಯಾಗಿದ್ದಾರೆಯೇ  ಎಂದು ಹೇಳಬಲ್ಲ  ಗರ್ಭಧಾರಣೆ ಪರೀಕ್ಷಾ ಕಿಟ್ ನ್ನು ಯುಕೆ ಬಿಡುಗಡೆ ಮಾಡಿದೆ.

ರುಸಲೇಂ ಮೂಲದ ಸ್ಟಾರ್ಟ್ ಅಪ್ ಸ್ಯಾಲಿಗ್ನೋಸ್ಟಿಕ್ಸ್ ಅಭಿವೃದ್ಧಿ ಪಡಿಸಿದ ಈ ಕ್ರಾಂತಿಕಾರಿ ಉತ್ಪನ್ನವು ಕೇವಲ ‘ಲಾಲಾರಸ (ಉಗುಳು) ಪರೀಕ್ಷೆ’ಯೊಂದಿಗೆ ಗರ್ಭಧಾರಣೆಯನ್ನು ಪತ್ತೆ ಹಚ್ಚುವ ಮೊದಲ ಉತ್ಪನ್ನವಾಗಿದೆ. ಇದು ಮಹಿಳೆಯರಿಗೆ ಸಾಂಪ್ರದಾಯಿಕ ಮೂತ್ರ ಆಧಾರಿತ ಗರ್ಭಧಾರಣೆ ಪರೀಕ್ಷೆಗಳಿಗೆ ಪರ್ಯಾಯವನ್ನು ನೀಡುತ್ತದೆ ಮತ್ತು ಯುಕೆ ಮತ್ತು ಐರ್ಲೆಂಡ್ನಲ್ಲಿ ಲಭ್ಯವಿದೆ. ಪರೀಕ್ಷಾ ಕಿಟ್ ಅನ್ನು ಜೆರುಸಲೇಂ ಮೂಲದ ಸ್ಟಾರ್ಟ್ ಅಪ್ ಸ್ಯಾಲಿಗ್ನೋಸ್ಟಿಕ್ಸ್ ಅಭಿವೃದ್ಧಿಪಡಿಸಿದೆ. ಇದು ಕೋವಿಡ್ ಪರೀಕ್ಷಾ ಕಿಟ್ ಗಳನ್ನು  ತಯಾರಿಸಲು ಬಳಸುವ ತಂತ್ರಜ್ಞಾನವನ್ನು ಆಧರಿಸಿದೆ ಎಂದು ಕಂಪನಿ ಹೇಳಿದೆ.

ಫೋಮ್-ಟಿಪ್ಪಿಂಗ್ ಕೋಲನ್ನು ಥರ್ಮೋಮೀಟರ್ನಂತೆ ಕೆಲವು ಕ್ಷಣಗಳವರೆಗೆ ಬಾಯಿಯಲ್ಲಿ ಇಡಬೇಕು. ಇದು ಲಾಲಾರಸದ ಮಾದರಿಯನ್ನು ಸಂಗ್ರಹಿಸುತ್ತದೆ ಎಂದು ಹೇಳಿದೆ. ಮಹಿಳೆಯರು  ಕೆಲವು ಹೊತ್ತು ಈ ಕಿಟ್ ಬಾಯಿಯಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ. ಬಳಿಕ ಇದು ಗ್ರಾಹಕರ ಲಾಲಾರಸವನ್ನು ಸಂಗ್ರಹಿಸಲು ಕಿಟ್ ಗೆ ಸಹಾಯ ಮಾಡುತ್ತದೆ. ನಂತರ ಪರೀಕ್ಷಾ ಕಿಟ್ ಜೈವಿಕ ರಾಸಾಯನಿಕ ಕ್ರಿಯೆ ನಡೆಯುವ ಪ್ಲಾಸ್ಟಿಕ್ ಟ್ಯೂಬ್ ನಲ್ಲಿ ಇಟ್ಟ ಬಳಿಕ ಈ ಪರೀಕ್ಷೆಯು ಗರ್ಭಧಾರಣೆಗೆ ಅಗತ್ಯವಾಗಿರುವ ನಿರ್ದಿಷ್ಟವಾದ ಹಾರ್ಮೋನ್ ಅನ್ನು ಕಂಡುಹಿಡಿಯುತ್ತದೆ. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಕಿಟ್ ನ  ಹಿಂಬದಿಯಲ್ಲಿ ನೀಡಲಾಗುತ್ತದೆ.  ಯುಕೆ ಮತ್ತು ಐರ್ಲೆಂಡ್ನಾದ್ಯಂತ ಕಿಟ್  ಈಗ ಖರೀದಿಗೆ ಸುಲಭವಾಗಿ ಲಭ್ಯವಿದೆ ಎಂದು ವರದಿಗಳು ಹೇಳಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read