ಚರ್ಮದಲ್ಲಿ ಹಲವು ವಿಧವಿದೆ. ಕೆಲವರು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಇಡಿ ಮುಖ ಎಣ್ಣೆಯಿಂದ ಕೂಡಿರುತ್ತದೆ, ಇನ್ನೂ ಕೆಲವರು ಒಣ ಚರ್ಮ ಹೊಂದಿರುತ್ತಾರೆ. ಅಂತವರ ಚರ್ಮ ಯಾವಾಗಲೂ ಒಣಗಿರುತ್ತದೆ. ಆದರೆ ಒಣ ಹಾಗೂ ಎಣ್ಣೆ ಮಿಶ್ರ ಚರ್ಮವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ.
*ಸನ್ ಸ್ಕ್ರೀನ್ ಬಳಸುವುದರ ಮೂಲಕ ಮಿಶ್ರಿತ ಚರ್ಮವನ್ನು ಪತ್ತೆ ಮಾಡಬಹುದು. ಇಡೀ ಮುಖಕ್ಕೆ ಸನ್ ಸ್ಕ್ರೀನ್ ಹಚ್ಚಿ ಸ್ವಲ್ಪ ಹೊತ್ತಿನಲ್ಲಿ ಮೂಗು, ಹಣೆ ಮತ್ತು ಕೆನ್ನೆ ಪಳಪಳನೆ ಹೊಳೆಯುತ್ತಿದ್ದರೆ ಇದು ಒಣ ಹಾಗೂ ಎಣ್ಣೆ ಮಿಶ್ರಿತ ಚರ್ಮ ಎಂದು ತಿಳಿಯಬಹುದು.
*ಮಿಶ್ರಿತ ಚರ್ಮ ಹೊಂದಿರುವವರು ತಮ್ಮ ಮುಖದ ಮೂಗು, ಹಣೆ ಮತ್ತು ಗಲ್ಲದ ಮೇಲೆ ಗುಳ್ಳೆಗಳನ್ನು ಹೊಂದಿದ್ದು, ಉಳಿದ ಕಡೆ ಬಿರುಕುಗಳು ಮೂಡಿರುತ್ತದೆ.