ದ್ವಿಚಕ್ರ ವಾಹನ ಚಲಾಯಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹೆಲ್ಮೆಟ್ ಧರಿಸದಿದ್ದರೆ ಜನಸಾಮಾನ್ಯರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಆದರೆ, ಪೊಲೀಸರೇ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಏನು ಮಾಡುವುದು? ಇದೀಗ ಇಬ್ಬರು ಮಹಿಳಾ ಪೊಲೀಸರು ಹೆಲ್ಮೆಟ್ ಧರಿಸದೆ ಸ್ಕೂಟಿ ಸವಾರಿ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.
ಮಹಿಳಾ ಪೊಲೀಸರ ಈ ಟ್ರಾಫಿಕ್ ನಿಯಮ ಉಲ್ಲಂಘನೆ, ಕಾನೂನುಗಳು ಸಾರ್ವಜನಿಕರಿಗಾಗಿ ಮಾತ್ರವೇ ಹೊರತು ಅಧಿಕಾರಿಗಳಿಗೆ ಅಲ್ಲ ಅಂತಾ ನೆಟ್ಟಿಗರು ಕಿಡಿಕಾರಿದ್ದಾರೆ. ಸಾಮಾನ್ಯ ಜನರು ಹೆಲ್ಮೆಟ್ ಇಲ್ಲದೆ ಬೈಕ್ ರೈಡ್ ಮಾಡಿದ್ರೆ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ.
ಫೋಟೋದಲ್ಲಿ ಮಹಿಳಾ ಪೊಲೀಸರ ಮುಖವನ್ನು ಬಹಿರಂಗಪಡಿಸದಿದ್ದರೂ, ಮಹಿಳಾ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ಸ್ಪಷ್ಟವಾಗಿ ಕಾಣಬಹುದು. ಟ್ವಿಟರ್‌ನಲ್ಲಿ ಚಿತ್ರವನ್ನು ಹಂಚಿಕೊಂಡ ಬಳಕೆದಾರರು ವಾಹನದ ಸಂಖ್ಯೆಯನ್ನು ನಮೂದಿಸಿದ್ದಾರೆ. ಇದು ಸಂಚಾರ ನಿಯಮ ಉಲ್ಲಂಘನೆ ಅಲ್ಲವೇ? ಎಂದು ಪ್ರಶ್ನಿಸುತ್ತಾ ಮಹಾರಾಷ್ಟ್ರ ಸಿಎಂ, ಡಿಸಿಎಂ, ಮುಂಬೈ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್ ಗಳನ್ನು ಟ್ಯಾಗ್ ಮಾಡಿದ್ದಾರೆ.
ಒಂದು ವೇಳೆ ಜನಸಾಮಾನ್ಯರು ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ್ರೆ ನಮ್ಮಿಂದ ಕೆಲವೇ ಗಂಟೆಗಳಲ್ಲಿ ದಂಡ ಪಾವತಿ ಮಾಡಿಸುತ್ತಾರೆ ಎಂದೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನು ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪೊಲೀಸರು ಆದಷ್ಟು ಬೇಗ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
https://twitter.com/MTPHereToHelp/status/1644538430724927490?ref_src=twsrc%5Etfw%7Ctwcamp%5Etweetembed%7Ctwterm%5E1644538430724927490%7Ctwgr%5E04b042219e880c46804f8544f81d283a4f2db150%7Ctwcon%5Es1_&ref_url=https%3A%2F%2Fwww.news18.com%2Fbuzz%2Ffemale-cops-ride-scooty-without-helmet-man-asks-isnt-this-traffic-rule-violation-7501495.html