ಟೀ ಅಥವಾ ಕಾಫಿ ಜೊತೆ ಪಕೋಡ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದರಲ್ಲೂ ಚಳಿಗಾಲ ಬಂತೆಂದರೆ ಗರಂ ಗರಂ ಪಕೋಡಾ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಕೆಲವರಿಗೆ ಹೊಟೆಲ್ ಶೈಲಿಯ ಪಕೋಡಾ ತಯಾರಿಸಲು ಬರುವುದಿಲ್ಲ. ಕೆಲ ಟಿಪ್ಸ್ ಮೂಲಕ ರೆಸ್ಟೊರೆಂಟ್ ಶೈಲಿಯಲ್ಲಿ ಪಕೋಡಾ ಮಾಡಬಹುದು.
ಪಕೋಡಾ ತಯಾರಿಸಲು ಕಡಲೆಹಿಟ್ಟನ್ನು ಕಲಸುವಾಗ ತಣ್ಣನೆಯ ನೀರನ್ನು ಬಳಸಿ.
ಹಿಟ್ಟನ್ನು ಕಲಸಿದ ನಂತರ ಅದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ಹಿಟ್ಟನ್ನು ಕಲಸುವಾಗ ಸ್ವಲ್ಪ ಅನ್ನ ಅಥವಾ ಜೋಳದ ಹಿಟ್ಟನ್ನು ಹಾಕಿ ಜೊತೆಗೆ 8-10 ಚಮಚ ಬಿಸಿ ಎಣ್ಣೆಯನ್ನು ಹಾಕಿ.
ಕಡಲೆ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಕಲಸುತ್ತಿರಿ. ಸ್ವಲ್ಪ ಸಮಯದ ಬಳಿಕ ಒಂದು ಲೋಟ ನೀರಿಗೆ ಒಂದು ಹನಿ ಕಲಸಿದ ಹಿಟ್ಟನ್ನು ಹಾಕಿ. ನೀವು ಹಾಕಿದ ಹಿಟ್ಟು ನೀರಿನಿಂದ ಮೇಲೆ ಬಂದರೆ ಆಗ ಹಿಟ್ಟು ಕಲಸುವುದನ್ನು ನಿಲ್ಲಿಸಿ. ಹಿಟ್ಟನ್ನು ಒಂದೇ ದಿಕ್ಕಿನಲ್ಲಿ ಗಂಟಿಲ್ಲದಂತೆ ಕಲಸಿ.
ಕಲಸಿದ ಹಿಟ್ಟು ತುಂಬ ತೆಳ್ಳಗೆ ಹಾಗೂ ತುಂಬ ದಪ್ಪಗೆ ಆಗದಂತೆ ಎಚ್ಚರವಹಿಸಿ. ಯಾವ ತರಕಾರಿಯ ಪಕೋಡಾವನ್ನು ಮಾಡುತ್ತೀರೋ ಆ ತರಕಾರಿಯನ್ನು ಮೊದಲೇ ತೊಳೆದು ನೀರಿಲ್ಲದಂತೆ ಒಣಗಿಸಿ. ಎಣ್ಣೆ ಚೆನ್ನಾಗಿ ಕಾದ ಮೇಲೆಯೇ ಪಕೋಡಾ ತಯಾರಿಸಿ.