ಹಾರ್ಮೋನ್ ಸಮಸ್ಯೆಯಿಂದಾಗಿ ಅನೇಕರ ಕುತ್ತಿಗೆ ಕಪ್ಪಗಾಗಿರುತ್ತದೆ. ಇದನ್ನು ಹೊರತುಪಡಿಸಿ ಸೂರ್ಯನ ಶಾಖ, ಯಾವೋ ಔಷಧಿಗಳು ರಿಯಾಕ್ಷನ್ ಆಗಿ ಕೂಡ ಈ ಸಮಸ್ಯೆ ನಿಮಗೂ ಕಾಡಿರಬಹುದು. ಅತಿಯಾದ ಇನ್ಸುಲಿನ್ ಮಟ್ಟ, ದೇಹವನ್ನು ಶುದ್ಧವಾಗಿಡದೇ ಇರೋದು ಇವೆಲ್ಲವೂ ಕೂಡ ಕುತ್ತಿಗೆ ಕಪ್ಪಾಗಲು ಕಾರಣವಾಗಿದೆ.
ಆದರೆ ಈ ಸಮಸ್ಯೆ ಪರಿಹಾರವಾಗೋದೇ ಇಲ್ವೇ..? ಎಂದು ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮನೆಯ ಮದ್ದಿನ ಮೂಲಕ ಕಪ್ಪು ಕುತ್ತಿಗೆಯ ಬಣ್ಣವನ್ನು ಕೆಲವೇ ದಿನಗಳಲ್ಲಿ ಬದಲಾಯಿಸಬಹುದಾಗಿದೆ.
ಕುತ್ತಿಗೆ ಸುತ್ತ ಕಪ್ಪಾಗಿದ್ದಲ್ಲಿ ನೀವು ಮಾಡಬೇಕಾಗಿರೋದೇನು..?
ಪ್ರತಿದಿನವೂ ಕುತ್ತಿಗೆಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
ಕುತ್ತಿಗೆಗೆ ಸನ್ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ.
ಆಂಡಭರದ ಆಭರಣಗಳು, ಹೈ ನೆಕ್ ಧಿರಸುಗಳನ್ನು ಬಳಕೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ.
ಕುತ್ತಿಗೆ ಬೆಳ್ಳ ಮಾಡಬೇಕೆಂದು ಯಾವ್ಯಾವುದೋ ಕೆಮಿಕಲ್, ಅಥವಾ ಬ್ರಶ್ನಿಂದ ಅತಿಯಾಗಿ ತೊಳೆಯಬೇಡಿ.
ಅತಿಯಾದ ತೂಕ ಹೊಂದಿರುವವರು ತೂಕ ಇಳಿಸಿಕೊಳ್ಳುವ ಮೂಲಕವೂ ಈ ಸಮಸ್ಯೆಯಿಂದ ಪಾರಾಗಬಹುದು.