ಬಳ್ಳಾರಿ: ಬಳ್ಳಾರಿ ಗ್ರಾಮೀಣ ಜೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್‌ನ ಸರಾಸರಿ ಮೊತ್ತ ಠೇವಣಿಯಲ್ಲಿಡಲು ಸೂಚನೆ ನೀಡಲಾಗಿದೆ.
ಜೆಸ್ಕಾಂ ಬಳ್ಳಾರಿ ಗ್ರಾಮೀಣ ಉಪ-ವಿಭಾಗ ಮತ್ತು ಜೆಸ್ಕಾಂ ಕುರುಗೋಡು ಉಪ-ವಿಭಾಗದ ವಿದ್ಯುತ್ ಗ್ರಾಹಕರು ಜನವರಿ-2023 ರಿಂದ ಡಿಸೆಂಬರ್-23 ವರೆಗೆ ಬಳಸಲಾದ ಒಟ್ಟು ವಿದ್ಯುತ್ ಬಿಲ್ಲಿನ ಸರಾಸರಿ ಮೊತ್ತದ, ಎರಡು ಪಟ್ಟು ಮೊತ್ತವನ್ನು ಖಾತೆಯಲ್ಲಿ ಠೇವಣಿ ರೂಪದಲ್ಲಿ ಇರಬೇಕು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ಬಾಬು ಅವರು ತಿಳಿಸಿದ್ದಾರೆ.
ವಿದ್ಯುತ್ ಗ್ರಾಹಕರು ತಮ್ಮ ಖಾತೆಯಲ್ಲಿ ಈಗಾಗಲೇ ಇರುವಂತಹ ಠೇವಣಿ, ಈ ಮೊತ್ತಕ್ಕಿಂತ ಕಡಿಮೆ ಇದ್ದಲ್ಲಿ ಅದನ್ನು ನಿಗಮವು ಅಧಿಕ ಭದ್ರತಾ ಠೇವಣಿ(ಎ.ಎಸ್.ಡಿ) ರೂಪದಲ್ಲಿ ವಸೂಲಿ ಮಾಡುವ ಹಕ್ಕು ಹೊಂದಿರುತ್ತದೆ. ತಮ್ಮ ವಿದ್ಯುತ್ ಬಿಲ್ಲಿನ ಕೆಳ ಭಾಗದಲ್ಲಿ ಎ.ಎಸ್.ಡಿ ಎಂದು ನಮೂದಾಗಿರುವ ಮೊತ್ತವನ್ನು ಆ.29 ರೊಳಗೆ ಪಾವತಿಸಬೇಕು.
ಮೊತ್ತವನ್ನು ಜೆಸ್ಕಾಂ ಕಚೇರಿ ಅಥವಾ ಆನ್‌ಲೈನ್ www.gescom.online.payment ಮೂಲಕ ಪಾವತಿಸಬಹುದು. ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.