ಶಿವಮೊಗ್ಗ: ಚುನಾವಣೆ ಚಿಹ್ನೆಗಳ ಕುರಿತು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ದೇಶ ಪ್ರೇಮ ಬರುವ ಚಿಹ್ನೆಗಳನ್ನು ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಆದರೆ, ಚುನಾವಣೆಯಲ್ಲಿ ಚಿತ್ರ ವಿಚಿತ್ರ ಚಿಹ್ನೆಗಳು ಇವೆ. ಇಂತಹ ಸುಡುಗಾಡು ಚಿಸ್ನೆ ನೋಡಿ ಅಚ್ಚರಿಯಾಗಿದೆ ಎಂದು ಚುನಾವಣೆ ಚಿಹ್ನೆಗಳ ಕುರಿತಾಗಿ ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯನ್ನು ಅಪ್ಪ, ಮಕ್ಕಳ ಹಿಡಿತದಿಂದ ಮುಕ್ತಗೊಳಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕೀಯ ನಡೆಸಲಾಗಿದೆ. ಶಿಕಾರಿಪುರದಲ್ಲಿ ತಂದೆ, ಮಕ್ಕಳು ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ರಾಜಕೀಯ ಮಾಡಿದ್ದಾರೆ. ಇತಿಹಾಸ ಶಿಕಾರಿಪುರ ಇತಿಹಾಸದಲ್ಲಿಯೇ ಹೆಚ್ಚು ಹಣ ಖರ್ಚು ಮಾಡಿ ಗೆದ್ದಿದ್ದಾರೆ. ಈ ಮಾತನ್ನು ನಾನಲ್ಲ, ಕಾಂಗ್ರೆಸ್ ಪಕ್ಷದವರೇ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಪ್ಪ, ಮಕ್ಕಳನ್ನು ಸೋಲಿಸಬೇಕು. ನಾನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.