ನಿಮ್ಮ ಮುಖದಲ್ಲಿ ದೊಡ್ಡ ನಗುವನ್ನು ಮೂಡಿಸಲು ನೀವು ಏನನ್ನಾದರೂ ಹುಡುಕುತ್ತಿದ್ದರೆ, ಇಲ್ಲಿದೆ ನಿಮಗಾಗಿ ಒಂದು ಕುತೂಹಲದ ವಿಡಿಯೋ. ಅಮೆರಿಕದ ಕೆಂಟುಕಿಯಲ್ಲಿ ವಯಸ್ಸಾದ ಮಹಿಳೆಯರ ಗುಂಪು ನೀಡಿದ ಕಾರ್ಯಕ್ರಮ ಕಂಡು ನಿಜಕ್ಕೂ ಹುಬ್ಬೇರಿಸುತ್ತೀರಿ. ಪಾಪ್ ತಾರೆ ರಿಹಾನ್ನಾ ರೀತಿಯಲ್ಲಿ ವೃದ್ಧೆಯೊಬ್ಬರು ಹಾಡಿರುವುದು ಬೆರಗುಗೊಳಿಸುತ್ತದೆ.
ಇದರ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಅರ್ಕಾಡಿಯಾ ಸೀನಿಯರ್ ಲಿವಿಂಗ್ ಬೌಲಿಂಗ್ ಗ್ರೀನ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಿರು ವಿಡಿಯೋದಲ್ಲಿ 80-92 ವರ್ಷ ವಯಸ್ಸಿನ 11 ಮಹಿಳೆಯರು ಬಿಳಿ ಬಟ್ಟೆ ಧರಿಸಿ ಹಿನ್ನೆಲೆ ನೃತ್ಯಗಾರರಾಗಿ ನಟಿಸಿದ್ದಾರೆ. ಅವರೆಲ್ಲರೂ ಸಿಂಕ್ರೊನೈಸೇಶನ್‌ನಲ್ಲಿ ಡೋರಾ ಮಾರ್ಟಿನ್ ಎಂಬ 87 ವರ್ಷದ ಮಹಿಳೆಯು ರಿಹಾನ್ನಾ ಅವರಂತೆಯೇ ಕೆಂಪು ಬಟ್ಟೆ ಧರಿಸಿರುವುದನ್ನು ನೋಡಬಹುದು. ಈ ವೃದ್ಧೆ ರಿಹಾನ್ನಾ ಅವರ “ರೂಡ್ ಬಾಯ್” ಹಾಡನ್ನು ಲಿಪ್ ಸಿಂಕ್ ಮಾಡುವುದನ್ನು ಕಾಣಬಹುದು.
ವೀಡಿಯೊವು 50 ಸಾವಿರಕ್ಕೂ ಅಧಿಕ ವೀಕ್ಷಣೆ ಗಳಿಸಿದ್ದು, ವೃದ್ಧೆಯರ ಸ್ಫೂರ್ತಿಗೆ ಹ್ಯಾಟ್ಸ್ಆಫ್ ಹೇಳುತ್ತಿದ್ದಾರೆ.