ಮದುವೆಯಾದ ವಾರಕ್ಕೇ ವಿಚ್ಛೇದನದ ಅರ್ಜಿ ಸಲ್ಲಿಸುವ, ಒಬ್ಬರೇ ಸಂಗಾತಿಯೊಂದಿಗೆ ಇರುವುದು ಬೋರಿಂಗ್ ಎನ್ನುವ ಇಂದಿನ ದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಪಾಠ ಹೇಳಿಕೊಡಬಲ್ಲ ಜೋಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ಪ್ರೈವಿ ಪಿಕ್ಚರ್ಸ್ ಹೆಸರಿನ ಖಾತೆಯಲ್ಲಿ ಶೇರ್ ಮಾಡಲ್ಪಟ್ಟ ಈ ವಿಡಿಯೋದಲ್ಲಿ ಹಿರಿಯ ದಂಪತಿಗಳ ಅನ್ಯೋನ್ಯತೆ ನೆಟ್ಟಿಗರ ಮನಗೆದ್ದಿದೆ. ಪರಸ್ಪರ ಚಿಯರ್ಸ್ ಹೇಳಿಕೊಂಡು ಬಿಯರ್ ಹೀರುತ್ತಿರುವ ಈ ದಂಪತಿಯ ವಿಡಿಯೋವನ್ನು ಮುಂಬಯಿಯ ರೆಸ್ಟೋರೆಂಟ್ ಒಂದರಲ್ಲಿ ರೆಕಾರ್ಡ್ ಮಾಡಲಾಗಿದೆ.
“ಹಿರಿಯ ಜೋಡಿಯೊಂದು ಹೀಗೆ ಬಿಯರ್ ಹಂಚಿಕೊಂಡು ಕುಡಿಯುವುದನ್ನು ನೀವು ಭಾರತದಲ್ಲಿ ನೋಡುವುದು ಬಲೇ ಅಪರೂಪ. ನಾನು ಮತ್ತು ನನ್ನ ಸ್ನೇಹಿತರು ಅಂಥ ಒಂದು ಜೋಡಿಯನ್ನು ಮುಂಬಯಿಯ ರೆಸ್ಟೋರೆಂಟ್ ಒಂದರಲ್ಲಿ ನೋಡಿದ್ದೇವೆ. ಅವರನ್ನು ನೋಡುತ್ತಲೇ ದಂಗಾದ ನಾವು, ನಿಮ್ಮನ್ನು ಫೋಟೋದಲ್ಲಿ ಸೆರೆಹಿಡಿಯಬಹುದೇ ಎಂದು ಕೇಳಿದೆವು. ಹಾಗೇ ಅವರ ಜೀವನಾನುಭವಗಳ ಬಗ್ಗೆ ಕೇಳಿದ್ದು ಸಂತಸ ನೀಡಿತು,” ಎಂದು ಕ್ಯಾಪ್ಷನ್‌ನಲ್ಲಿ ತಿಳಿಸಲಾಗಿದೆ.
ಆರು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿರುವ ಈ ವಿಡಿಯೋಗೆ ಟನ್‌ಗಟ್ಟಲೇ ಪ್ರತಿಕ್ರಿಯೆಗಳು ದೊರಕಿವೆ. ತಮಗೂ ಇದೇ ರೀತಿಯ ಸಾಮರಸ್ಯ ತುಂಬಿದ ದಾಂಪತ್ಯ ಸಿಕ್ಕರೆ ಎಷ್ಟು ಚಂದ ಎಂದು ಜನರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.
https://youtu.be/Dducmx2cBCI