ಜ್ಯೋತಿಷಿಗಳ ಪ್ರಕಾರ, 2024 ರ ಮೊದಲ ಸೂರ್ಯಗ್ರಹಣ ಏಪ್ರಿಲ್ ತಿಂಗಳಲ್ಲಿ ಸಂಭವಿಸಲಿದೆ. ಸೂರ್ಯಗ್ರಹಣ ಅನೇಕ ದೇಶಗಳಲ್ಲಿ ಗೋಚರಿಸಲಿದೆ. ಆದ್ರೆ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ. ಸೂರ್ಯ ಗ್ರಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಗ್ರಹ – ನಕ್ಷತ್ರದಲ್ಲಾಗುವ ಬದಲಾವಣೆ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಸೂರ್ಯ ಗ್ರಹಣಕ್ಕಿಂತ ಮೊದಲು ಕೆಲ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಅನೇಕರು ಸಮಸ್ಯೆಗಳನ್ನು ಎದುರಿಸುತ್ತಾರೆ.
ವೃಷಭ : 2024 ರ ಮೊದಲ ಸೂರ್ಯಗ್ರಹಣವು ವೃಷಭ ರಾಶಿಯವರಿಗೆ ಒಳ್ಳೆಯದಲ್ಲ. ಗ್ರಹಣದಿಂದಾಗಿ ಕೆಲ ಸಮಸ್ಯೆ ಎದುರಾಗುತ್ತದೆ. ಹಣಕಾಸಿನ ತೊಂದರೆ ಕಾಡುತ್ತದೆ. ವಿವಾಹಿತರ ಜೀವನದಲ್ಲಿ ಪ್ರಕ್ಷುಬ್ಧತೆ ಉಂಟಾಗಬಹುದು. ನೆರೆಹೊರೆಯವರೊಂದಿಗೆ ಜಗಳವಾಗುವ ಸಾಧ್ಯತೆಯೂ ಇದೆ.
ಕರ್ಕ : ವರ್ಷದ ಮೊದಲ ಸೂರ್ಯಗ್ರಹಣವನ್ನು ಕರ್ಕ ರಾಶಿಯವರಿಗೆ ಅಶುಭವೆಂದು ಪರಿಗಣಿಸಲಾಗಿದೆ. ಜೀವನದಲ್ಲಿ ಅನೇಕ ರೀತಿಯ ಸಮಸ್ಯೆ ಉದ್ಭವಿಸಬಹುದು. ವ್ಯಾಪಾರದಲ್ಲಿ ನಷ್ಟ ಆಗುವ ಸಾಧ್ಯತೆ ಇದೆ. ನೆಮ್ಮದಿ ಇಲ್ಲದ ಜೀವನ ನಿಮ್ಮದಾಗಲಿದೆ.
ತುಲಾ ರಾಶಿ : ಮೊದಲ ಸೂರ್ಯಗ್ರಹಣ ತುಲಾ ರಾಶಿಯವರಿಗೂ ಮಂಗಳಕರವಾಗಿರೋದಿಲ್ಲ. ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಕಾಡುತ್ತದೆ. ವ್ಯಾಪಾರದಲ್ಲೂ ಪ್ರಗತಿ ಇರೋದಿಲ್ಲ. ಇದರಿಂದ ಮಾನಸಿಕ ಒತ್ತಡ ನಿಮ್ಮನ್ನು ಕಾಡಬಹುದು. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಒಳ್ಳೆಯದು.
ವೃಶ್ಚಿಕ : ಈ ರಾಶಿಯವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ವೈಯಕ್ತಿಕ ಜೀವನದ ಜೊತೆ ವ್ಯಾಪಾರದಲ್ಲೂ ನಷ್ಟವಾಗುತ್ತದೆ. ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಧನು : ಮೊದಲ ಸೂರ್ಯ ಗ್ರಹಣ ನಿಮ್ಮ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಕೆಲಸ ಕ್ಷೇತ್ರದಲ್ಲಿ ತೊಂದರೆ ಕಾಡಲಿದೆ. ಕೆಲಸದಲ್ಲಿ ಒತ್ತಡ ಉಂಟಾಗಲಿದೆ.