
ನವದೆಹಲಿ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವ ವೇಳೆ ಭಾರತ ಚುನಾವಣಾ ಆಯೋಗ(ಇಸಿಐ) ಎಲ್ಲಾ ಹಂತದ ನಕ್ಷೆ ಹಂಚಿಕೊಂಡಿದೆ.
ಇದು ಒಟ್ಟು ಕ್ಷೇತ್ರಗಳ ಸಂಖ್ಯೆಯನ್ನು 543 ಬದಲಿಗೆ 544 ಎಂದು ತೋರಿಸಿದೆ. ಇದರ ಬಗ್ಗೆ ಗಮನಸೆಳೆದಾಗ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಜನಾಂಗೀಯ ಹಿಂಸಾಚಾರದ ನಡುವೆ ವಿಶೇಷ ಪರಿಸ್ಥಿತಿಯಿಂದಾಗಿ ಮಣಿಪುರದ ಒಂದು ಸಂಸದೀಯ ಕ್ಷೇತ್ರದಲ್ಲಿ ಎರಡು ಬಾರಿ ಚುನಾವಣೆ ನಡೆಯಲಿದೆ. ಮಣಿಪುರದ ಒಂದು ಕ್ಷೇತ್ರದಲ್ಲಿ ಎರಡು ಬಾರಿ ಚುನಾವಣೆ ನಡೆಯುವುದೇ ಇದಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದರು.
ಮಣಿಪುರದ ಎರಡು ಕ್ಷೇತ್ರಗಳಲ್ಲಿ ಒಂದಾದ ಹೊರ ಮಣಿಪುರದಲ್ಲಿ ಕುಕಿಗಳು ಮತ್ತು ಮೈಟೈಸ್ ಸಮುದಾಯಗಳ ನಡುವಿನ ಇತ್ತೀಚಿನ ಜನಾಂಗೀಯ ಹಿಂಸಾಚಾರವನ್ನು ಪರಿಗಣಿಸಿ ಎರಡು ದಿನಗಳಲ್ಲಿ ಮತದಾನ ಮಾಡಲು ಅವಕಾಶವಿದೆ. ಇನ್ನರ್ ಮಣಿಪುರ ಕ್ಷೇತ್ರಕ್ಕೆ ಏಪ್ರಿಲ್ 19 ರಂದು(ಹಂತ 1), ಹೊರ ಮಣಿಪುರದಲ್ಲಿ ಏಪ್ರಿಲ್ 19 (ಹಂತ 1) ಮತ್ತು ಏಪ್ರಿಲ್ 26 (ಹಂತ 2) ಎರಡು ದಿನಾಂಕಗಳಲ್ಲಿ ಮತದಾನ ನಡೆಯಲಿದೆ.
ಹೊರ ಮಣಿಪುರ ಕ್ಷೇತ್ರದ ವ್ಯಾಪ್ತಿಗೆ ಬರುವ ಹೆರೋಕ್, ವಾಂಗ್‌ಜಿಂಗ್ ತೆಂತಾ, ಖಂಗಾಬೊಕ್, ವಾಬ್ಗೈ, ಕಾಕ್ಚಿಂಗ್, ಹಿಯಾಂಗ್ಲಾಮ್, ಸುಗ್ನೂ, ಚಾಂಡೆಲ್(ಎಸ್‌ಟಿ), ಸೈಕುಲ್(ಎಸ್‌ಟಿ), ಕಾಂಗ್ ಪೋಕ್ಪಿ, ಸೈಟು(ಎಸ್‌ಟಿ), ಹೆಂಗ್ಲೆಪ್(ಎಸ್‌ಟಿ), ಚುರಾಚಂದ್‌ಪುರ(ಎಸ್‌ಟಿ). ಸೈಕೋಟ್(ST), ಸಿಂಘತ್(ST) 15 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.
ಅದೇ ಲೋಕಸಭೆ ಕ್ಷೇತ್ರದ ಅಡಿಯಲ್ಲಿ ಉಳಿದ ವಿಧಾನಸಭಾ ಕ್ಷೇತ್ರಗಳಾದ ಜಿರಿಬಾಮ್, ತೆಂಗ್ನೌಪಾಲ್(ST), ಫುಂಗ್ಯಾರ್(ST), ಉಖ್ರುಲ್(ST), ಚಿಂಗೈ(ಎಸ್‌ಟಿ), ಕರೋಂಗ್(ಎಸ್‌ಟಿ), ಮಾವೋ(ಎಸ್‌ಟಿ), ತದುಬಿ(ಎಸ್‌ಟಿ), ತಮೇ(ಎಸ್‌ಟಿ), ತಮೆಂಗ್‌ಲಾಂಗ್(ಎಸ್‌ಟಿ), ನುಂಗ್ ಬಾ(ಎಸ್‌ಟಿ), ತಿಪೈಮುಖ್(ಎಸ್‌ಟಿ), ಮತ್ತು ಥನ್ಲೋನ್(ಎಸ್‌ಟಿ) ಏ. 26 ರಂದು ಚುನಾವಣೆ ನಡೆಯಲಿದೆ. ಹೆಚ್ಚುವರಿಯಾಗಿ ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಿಬಿರಗಳಲ್ಲಿ ವಾಸಿಸುವ ಜನರಿಗೆ ಮುಂಬರುವ ಚುನಾವಣೆಯಲ್ಲಿ ತಮ್ಮ ಶಿಬಿರಗಳಿಂದ ಮತ ಚಲಾಯಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.