ಮಳೆಗಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಶೀತ, ಕೆಮ್ಮು , ಕಫ ಆಗುವುದು ಸಾಮಾನ್ಯ. ಆಗ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕುಟಾಣಿಯಿಂದ ಕುಟ್ಟಿ ಅಥವಾ ತುರಿಯುವ ಮಣೆಯಿಂದ ತುರಿಯಿರಿ.
ಹೀಗೆ ಶುಂಠಿ ರಸವನ್ನು ಬೇರ್ಪಡಿಸಿ. ಈ ಶುಂಠಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ನೆಗಡಿ, ಕೆಮ್ಮು, ಕಫದ ಸಮಸ್ಯೆಯನ್ನು ಬಹುಬೇಗ ನಿವಾರಿಸುತ್ತದೆ. ಮಕ್ಕಳಿಗಾದರೆ ಅರ್ಧ ಚಮಚ ಸಾಕು.
ದಿನದಲ್ಲಿ ಮೂರೂ ಬಾರಿ ಇದನ್ನು ಸೇವಿಸಬಹುದು. ಉಷ್ಣ ಪ್ರವೃತ್ತಿ ಇರುವವರು ವೈದ್ಯರ ಸಲಹೆ ಪಡೆದು ಬಳಸುವುದು ಒಳ್ಳೆಯದು. ಇದನ್ನು ಸೇವಿಸುವುದರಿಂದ ತಕ್ಷಣ ಕೆಮ್ಮು ಅಥವಾ ಕಫದಿಂದ ಮುಕ್ತಿ ದೊರೆಯುತ್ತದೆ. ಮಕ್ಕಳಿಗೆ ಇದನ್ನು ಕುಡಿದ ತಕ್ಷಣ ವಾಂತಿಯಾಗುವ ಸಾಧ್ಯತೆಗಳೇ ಹೆಚ್ಚು. ಅದರಲ್ಲಿ ಹೆಚ್ಚಿನ ಕಫದ ಅಂಶ ಹೊರಹೋಗುವುದರಿಂದ ಮಗುವಿನ ಉಸಿರಾಟದ ಪ್ರಕ್ರಿಯೆ ಸುಲಭವಾಗುತ್ತದೆ.