ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶಾಸಕರ ವೇತನವನ್ನು ಹೆಚ್ಚಳ ಮಾಡಿರುವುದಾಗಿ ಘೋಷಿಸಿದ್ದಾರೆ.
ಸಂಬಳದಲ್ಲಿ ತಿಂಗಳಿಗೆ 40,000 ರೂಪಾಯಿಗಳನ್ನು ಹೆಚ್ಚಿಸುವುದಾಗಿ ಸಿಎಮ ಘೋಷಿಸಿದ್ದರಿಂದ ಪಶ್ಚಿಮ ಬಂಗಾಳದ ಶಾಸಕರಿಗೆ ಇದು ಸಂಭ್ರಮದ ಕ್ಷಣವಾಗಿದೆ. ಪ್ರಕಟಣೆಯ ಹೊರತಾಗಿ ಮುಖ್ಯಮಂತ್ರಿಯ ವೇತನದಲ್ಲಿ ಯಾವುದೇ ಪರಿಷ್ಕರಣೆ ಇರುವುದಿಲ್ಲ. ಏಕೆಂದರೆ ಅವರು ದೀರ್ಘಕಾಲದಿಂದ ಯಾವುದೇ ಸಂಬಳವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು,
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳ ವಿಧಾನಸಭೆಯ ಶಾಸಕರ ವೇತನವು ತುಂಬಾ ಕಡಿಮೆಯಾಗಿದೆ. ಆದ್ದರಿಂದ ಅವರ ವೇತನವನ್ನು ತಿಂಗಳಿಗೆ 40,000 ರೂ.ಗಳಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.