ನಶೆ ಅಮಲಿನಲ್ಲಿ ಖಾಸಗಿ ಅಂಗದೊಳಗೆ 12 ಸೆಂಮೀ ಗಾಜು ತುರುಕಿಕೊಂಡ ಕುಡುಕ

ಕುಡಿದ ಮತ್ತಿನಲ್ಲಿ ನೇಪಾಳದ ವ್ಯಕ್ತಿಯೊಬ್ಬ ತನ್ನ ಗುದದ್ವಾರದೊಳಗೆ 12 ಸೆಂಮೀ ಉದ್ದದ ಗಾಜನ್ನು ತುರುಕಿಕೊಂಡಿದ್ದಾನೆ. 43 ವರ್ಷ ವಯಸ್ಸಿನ ಈತ ಮಾಡಿಕೊಂಡ ಫಜೀತಿಯಿಂದ ಆತನ ಜೀವ ಉಳಿಸಲು ವೈದ್ಯರು ಮೂರು ದಿನ ಹರಸಾಹಸ ಪಡಬೇಕಾಯಿತು.

ರಾಷ್ಟ್ರೀಯ ವೈದ್ಯಕೀಯ ಸಂಘಟನೆಯು ಈ ಕುರಿತು ವಿವರಿಸಿದ್ದು; ಮೊದಲಿಗೆ ಆಕಸ್ಮಿಕವಾಗಿ ಹೀಗಾಯಿತೆಂದು ಈತ ಹೇಳಿಕೊಂಡಿದ್ದಾನೆ. ಆ ವೇಳೆ ಆತ ಕುಡಿದಿರುವಂತೆ ಕಂಡು ಬಂದಿದೆ. ಬಳಿಕ ಅದು ಅಪಘಾತವಲ್ಲ ಎಂದು ಆತನೇ ಒಪ್ಪಿಕೊಂಡಿದ್ದಾನೆ. ಲೈಂಗಿಕ ಸುಖ ಪಡಲು ಆತ ಗಾಜನ್ನು ಹಾಗೆ ಹಾಕಿಕೊಂಡಿದ್ದಾನೆ. ಇದರಿಂದಾಗಿ ಎರಡು ದಿನಗಳ ಮಟ್ಟಿಗೆ ಮಲ ವಿಸರ್ಜನೆ ಮಾಡಲು ಆಗಿರಲಿಲ್ಲ ಎಂದು ಆತ ವೈದ್ಯರ ಬಳಿ ಅಳಲು ತೋಡಿಕೊಂಡಿದ್ದಾನೆ.

ಮೊದಲಿಗೆ ಗಾಜನ್ನು ತಾನೇ ಹೊರತೆಗೆಯಲು ಯತ್ನಿಸಿದರೂ ಸಹ ಅದು ಫಲಕಾರಿಯಾಗದೇ ಇದ್ದಾಗ ವೈದ್ಯರ ಬಳಿ ಓಡಿ ಹೋಗಿದ್ದಾನೆ ಈ ಕುಡುಕ.

ಮೂರು ದಿನಗಳ ಶಸ್ತ್ರಚಿಕಿತ್ಸೆಯ ನಂತರ ಇನ್ನೂ ನಾಲ್ಕು ದಿನಗಳ ಮಟ್ಟಿಗೆ ಈತನನ್ನು ವೀಕ್ಷಣೆಯಲ್ಲಿ ಇರಿಸಿ, ಕೊನೆಗೆ ಏಳನೇ ದಿನ ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ ವೈದ್ಯರು. ಈ ಘಟನೆ ಕಳೆದು ಈಗ ಎರಡು ತಿಂಗಳಾಗಿದ್ದು ಈತ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read