ಕುಡಿತದ ಚಟ ಬಿಡಿಸುವುದಾಗಿ ಊಟ ಕೊಡದೇ ಮನಸೋ ಇಚ್ಛೆ ಥಳಿಸಿ ಚಿತ್ರಹಿಂಸೆ: ಓರ್ವ ಸಾವು

ತುಮಕೂರು: ಮದ್ಯವರ್ಜನ ಕೇಂದ್ರದಲ್ಲಿ ಶಿಬಿರಾರ್ಥಿಗಳಿಗೆ ಚಿತ್ರ ಹಿಂಸೆ ನೀಡಿದ ಆರೋಪ ಕೇಳಿ ಬಂದಿದೆ. ಕುಡಿತದ ಚಟ ಬಿಡಿಸುವುದಾಗಿ ಮನಸೋ ಇಚ್ಛೆ ಥಳಿಸಿ ವಿಕೃತಿ ಮೆರೆಯಲಾಗಿದೆ.

ತುಮಕೂರು ಹೊರವಲಯದ ಹೆಗ್ಗೆರೆಯ ಸಂಸ್ಥೆಯಲ್ಲಿ ಘಟನೆ ನಡೆದಿದೆ.  22 ಜನರನ್ನು ಸೇರಿಸಿಕೊಂಡು ಊಟ ತಿಂಡಿ ಕೊಡದೆ ಚಿತ್ರ ಹಿಂಸೆ ನೀಡಲಾಗಿದೆ. ತುಮಕೂರು ನಿವಾಸಿ ಖುರಂ ನಡೆಸುತ್ತಿರುವ ಈ ಮದ್ಯವರ್ಜನ ಕೇಂದ್ರದಲ್ಲಿ ಸಂಸ್ಥೆಯಲ್ಲಿ ಥಳಿತಕ್ಕೆ ಒಳಗಾದ ರೋಗಿ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ತುಮಕೂರು ನಗರದ ಮರಳೂರು ದಿಣ್ಣೆ ನಿವಾಸಿ ಫೈರೋಜ್ ಖಾನ್(33) ಮೂರು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಫೈರೋಜ್ ಖಾನ್ ಕುಡಿತದ ಚಟ ಬಿಡಿಸಲು ಮೂರು ತಿಂಗಳಿನಿಂದ ಮದ್ಯವರ್ಜನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಫೈರೋಜ್ ಸಾವಿಗೆ ಸಂಸ್ಥೆಯ ಸಿಬ್ಬಂದಿಯೇ ಕಾರಣ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read