ಬೇಸಿಗೆಯಲ್ಲಿ ದಿನಕ್ಕೊಂದು ಎಳನೀರು ಕುಡಿಯುವುದರಿಂದ ದೇಹ ಡಿಹೈಡ್ರೇಷನ್ ಆಗುವುದನ್ನು ತಪ್ಪಿಸಬಹುದು. ಮತ್ತು ಇದು ದೇಹ ಉಷ್ಣ ಸಂಬಂಧಿ ಸಮಸ್ಯೆಗಳಿಂದ ಬಳಲುವುದನ್ನು ತಪ್ಪಿಸುತ್ತದೆ.
ಎಳನೀರಿನಲ್ಲಿ ರೋಗ ನಿರೋಧಕ ಶಕ್ತಿ, ಸೋಂಕು ನಿವಾರಕ ಅಂಶಗಳಿವೆ. ಜ್ವರ ಮತ್ತಿತರ ವೈರಲ್ ಸೋಂಕಿನಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.
ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಉತ್ತಮ ಕೊಲೆಸ್ಟ್ರಾಲ್ ಎಚ್ ಡಿ ಎಲ್ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬುದನ್ನು ಸಂಶೋಧನೆಗಳು ಖಚಿತಪಡಿಸಿವೆ.
ದಿನಕ್ಕೆ ಮೂರರಿಂದ ನಾಲ್ಕು ಲೋಟ ಎಳನೀರು ಕುಡಿಯುವುದರಿಂದ ದೇಹ ತೂಕವನ್ನು ಕಡಿಮೆ ಮಾಡಬಹುದು. ಇದರಲ್ಲಿ ಕಡಿಮೆ ಕ್ಯಾಲರಿಗಳು ಇರುವುದರಿಂದ ಜೀರ್ಣ ಕ್ರಿಯೆ ಇನ್ನಷ್ಟು ಸುಲಭವಾಗುತ್ತದೆ.