ಅಲೋವೆರಾದಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಅಲೋವೆರಾ ಜ್ಯೂಸ್ ಅನ್ನು ಪ್ರತಿನಿತ್ಯ ಸೇವಿಸಿದರೆ ಕೂದಲಿನಿಂದ ಹಿಡಿದು ಹೊಟ್ಟೆನೋವಿನವರೆಗೆ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ರಸವನ್ನು ಕುಡಿಯುವುದರಿಂದ ಮುಖದ ಮೇಲಿನ ಮೊಡವೆಗಳು ಗುಣವಾಗುತ್ತವೆ. ಇದರಲ್ಲಿ ಅನೇಕ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಇದು ಮೊಡವೆಗಳನ್ನು ನಿವಾರಿಸುತ್ತದೆ.
ಹೊಟ್ಟೆ ಕೆಟ್ಟಿದ್ದರೆ ಅದಕ್ಕೂ ಅಲೋವೆರಾ ಜ್ಯೂಸ್‌ನಲ್ಲಿ ಪರಿಹಾರವಿದೆ. ಸಾಮಾನ್ಯವಾಗಿ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದ ನಂತರ ಹೊಟ್ಟೆಯಲ್ಲಿ ಸಮಸ್ಯೆಯಾಗುತ್ತದೆ. ಅಸಿಡಿಟಿ ಮತ್ತು ಮಲಬದ್ಧತೆಯಿದ್ದರೆ ಅಲೋವೆರಾ ಜ್ಯೂಸ್ ಕುಡಿಯಿರಿ.
ಚಳಿಗಾಲದಲ್ಲಿ ದೇಹದಲ್ಲಿ ಊತದ ಸಮಸ್ಯೆ ಕಾಣಿಸಿಕೊಂಡರೆ ಈ ಜ್ಯೂಸ್ ಕುಡಿಯಬೇಕು. ಇದನ್ನು ಕುಡಿಯುವುದರಿಂದ ಅನೇಕ ರೋಗಗಳು ನಮ್ಮ ಸುತ್ತ ಸುಳಿಯುವುದಿಲ್ಲ. ಅಂತಹ ಆರೋಗ್ಯಕಾರಿ ಅಂಶಗಳು ಇದರಲ್ಲಿವೆ.
ಅಲೋವೆರಾ ಜ್ಯೂಸ್ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಇದರ ರಸವು ರೋಗಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.
ಕೂದಲು ತುಂಬಾ ಉದುರುತ್ತಿದ್ದರೆ ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಸೇವಿಸಬೇಕು. ಕೂದಲು ಉದುರುವಿಕೆ ನಿಲ್ಲುತ್ತದೆ. ಅಲೋವೆರಾ ಜ್ಯೂಸ್ ಕುಡಿಯುವ ಮೂಲಕ ಮಧುಮೇಹವನ್ನು ಸಹ ನಿಯಂತ್ರಿಸಬಹುದು. ಅಲೋವೆರಾ ರಸದ ನಿಯಮಿತ ಸೇವನೆಯಿಂದ ದೃಷ್ಟಿ ಶಕ್ತಿ ಕೂಡ ಹೆಚ್ಚಾಗುತ್ತದೆ.