ನಮ್ಮ ಆರೋಗ್ಯದಲ್ಲಿ ನೀರಿನ ಪಾತ್ರ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಹೆಚ್ಚಿನ ಜನರು ತಣ್ಣೀರನ್ನು ಕುಡಿಯುತ್ತಾರೆ, ಆದರೆ ಬಿಸಿನೀರು ಸೇವನೆಯಿಂದ ದುಪ್ಪಟ್ಟು ಪ್ರಯೋಜನಗಳಿವೆ. ಅದರಲ್ಲೂ ರಾತ್ರಿ ಮಲಗುವ ಒಂದು ಲೋಟ ಬಿಸಿ ನೀರು ಕುಡಿಯುವುದರಿಂದ ಅಚ್ಚರಿಯ ಫಲಿತಾಂಶ ಪಡೆಯಬಹುದು.
ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ದೇಹದೊಳಗಿನ ಉಷ್ಣತೆ ಹೆಚ್ಚುತ್ತದೆ. ಇದರಿಂದಾಗಿ ರಕ್ತದ ಹರಿವು ಸುಧಾರಿಸುತ್ತದೆ. ಇದು ಬೆವರುವಿಕೆಗೆ ಕಾರಣವಾಗುತ್ತದೆ ಮತ್ತು ದೇಹದ ಒಳಗಿರುವ ಕೊಳೆಯು ಹೊರಹಾಕಲ್ಪಡುತ್ತದೆ.
ಮಲಬದ್ಧತೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರನ್ನು ಕುಡಿಯಬೇಕು. ರಾತ್ರಿ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ಬರುವುದಿಲ್ಲ. ಹೊಟ್ಟೆ ಶುದ್ಧವಾಗುತ್ತದೆ.
ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರು ಕೂಡ ಮಲಗುವ ಮುನ್ನ ಬಿಸಿನೀರು ಕುಡಿಯಬೇಕು. ಬೆಳಗಿನ ಜಾವದ ಬದಲು ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ತೂಕದಲ್ಲಿ ತ್ವರಿತ ಬದಲಾವಣೆ ಕಾಣಬಹುದು. ಏಕೆಂದರೆ ಇದು ಚಯಾಪಚಯವನ್ನು ಸಹ ಸುಧಾರಿಸುತ್ತದೆ.
ರಾತ್ರಿ ನಿದ್ದೆ ಬಾರದೆ ಕಷ್ಟಪಡುವವರು ಕೂಡ ಮಲಗುವ ಮುನ್ನ ಬೆಚ್ಚಗಿನ ನೀರು ಕುಡಿಯಬೇಕು. ಇದು ಉತ್ತಮ ನಿದ್ರೆಯನ್ನು ಒದಗಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.