alex Certify ರಾಜ್ಯ ರಾಜಧಾನಿಯ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ರಾಜಧಾನಿಯ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು….!

ಬೆಂಗಳೂರು ಡಬಲ್ ಡೆಕ್ಕರ್ ಬಸ್‌ಗಳಿಗೆ ಬಿಎಂಟಿಸಿ ಟೆಂಡರ್, ಯಾವ ಮಾರ್ಗ, ಕಾರ್ಯಾಚರಣೆ ಯಾವಾಗ ಗೊತ್ತಾ? | BMTC tender for double decker buses to Bengaluru, Do you know the when will the operation be ...

1979 – 80 ರ ದಶಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓಡಾಡುತ್ತಿದ್ದ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರವನ್ನು ಆ ಬಳಿಕ ಸ್ಥಗಿತಗೊಳಿಸಲಾಗಿದ್ದು, ಇದೀಗ ಮತ್ತೆ ಡಬಲ್ ಡೆಕ್ಕರ್ ಬಸ್ಸುಗಳನ್ನು ರಸ್ತೆಗಿಳಿಸಲು ಬಿಬಿಎಂಪಿ ಸಜ್ಜಾಗಿದೆ.

ಎರಡು ವಾರಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು ಚಿಂತನೆ ನಡೆಸಲಾಗಿದ್ದು, ಈಗಿನ ಪೀಳಿಗೆಗೆ ಡಬಲ್ ಡೆಕ್ಕರ್ ಬಸ್ಸುಗಳು ಮತ್ತೆ ಆಕರ್ಷಣೆಯ ಕೇಂದ್ರ ಬಿಂದುವಾಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದು ವರ್ಷದೊಳಗೆ 10 ಡಬಲ್ ಡೆಕ್ಕರ್ ಬಸ್ಸುಗಳು ಬೆಂಗಳೂರಿನಲ್ಲಿ ಸಂಚರಿಸಲಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರ ಕುರಿತು ಆಸಕ್ತಿ ಹೊಂದಿದ್ದು, ಬಿಬಿಎಂಪಿಗೆ ಈ ಬಸ್ಸುಗಳು ಬಂದ ಬಳಿಕ ಅವುಗಳ ಸಾಧಕ ಬಾಧಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಮೈಸೂರಿನಂತಹ ನಗರಗಳಲ್ಲಿ ಡಬಲ್ ಡೆಕ್ಕರ್ ಬಸ್ಸುಗಳನ್ನು ರಸ್ತೆಗಿಳಿಸಲು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...