ದರೋಡೆಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ನಾಯಿಯ ಸುದ್ದಿ ಈಗ ಬಹಳ ವೈರಲ್ ಆಗಿದೆ. ದರೋಡೆಕೋರರನ್ನು ತಡೆಯುವ ಸಂದರ್ಭದಲ್ಲಿ ಅವರ ಗುಂಡೇಟಿಗೆ ನಾಯಿ ಗಾಯಗೊಂಡಿತ್ತು. ನಂತರ 54 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತು. ನಂತರ ಆಸ್ಪತ್ರೆಯಲ್ಲಿ ಮೂರು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮನೆಗೆ ಹೋಗಲು ಸಿದ್ಧವಾಗಿದೆ.
ಊರಿಗೆ ಹೊರಡುವ ದಿನ ಆಸ್ಪತ್ರೆ ಸಿಬ್ಬಂದಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಿಕ್ಕಿತು. ಈ ಕುರಿತು ಗುಡ್‌ನ್ಯೂಸ್ ಮೂವ್‌ಮೆಂಟ್ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ನಾಯಿಯ ಹೆಸರು ಲಕ್.
ಲಕ್ ಎರಡು ತಿಂಗಳ ವಾಸ್ತವ್ಯದ ನಂತರ ಆಸ್ಪತ್ರೆಯನ್ನು ತೊರೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಮಾಲೀಕರೊಂದಿಗೆ ಹೊರಡುತ್ತಿದ್ದಂತೆ ಸಿಬ್ಬಂದಿ ಸಾಲಾಗಿ ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸುವುದನ್ನು ನೋಡಬಹುದು. 54 ದಿನಗಳ ಹಿಂದೆ, ದರೋಡೆಯ ಸಂದರ್ಭಲ್ಲಿ ನಾಯಿಗೆ ಗುಂಡು ಹಾರಿಸಲಾಗಿತ್ತು ಆಗ ಅದು ತೀವ್ರವಾಗಿ ಗಾಯಗೊಂಡಿತ್ತು.
HEROIC GOODBYE! 54 days ago Luck was shot and severly injured during a robbery.
Luck was hospitalized all this time and underwent 3 successful surgeries.
Today, it finally happened! His long-awaited release from the hospital. You're going home Luck!
— GoodNewsCorrespondent (@GoodNewsCorres1) June 1, 2023