ಗಂಡ-ಹೆಂಡತಿ ಅಥವಾ ಸ್ನೇಹಿತರು ಸಿಟ್ಟುಮಾಡಿಕೊಂಡಾಗ ಇನ್ನೊಬ್ಬರು ಬಂದು ರಮಿಸುವುದು ಮಾಮೂಲು. ಅಂಥ ಸಂದರ್ಭದಲ್ಲಿ ಇನ್ನೊಬ್ಬರು ತುಸು ಮುಂಗೋಪ ಮಾಡಿದಂತೆ ಮಾಡುವುದೂ ಮಾಮೂಲು. ಆದರೆ ಇದು ಕೇವಲ ಮನುಷ್ಯರಲ್ಲಿ ಅಲ್ಲ, ಪ್ರಾಣಿಗಳೂ ಮಾಡುತ್ತವೆ ಎಂದು ಹೇಳುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಒಂದು ನಾಯಿ ಸತ್ತಂತೆ ಮಲಗಿರುವುದನ್ನು ನೋಡಬಹುದು. ಇನ್ನೊಂದು ನಾಯಿ ಅದನ್ನು ಎಬ್ಬಿಸುತ್ತದೆ. ಎಷ್ಟೇ ಮಾಡಿದರೆ ಮಲಗಿದಂತೆ ನಟಿಸುತ್ತಿರುವ ನಾಯಿ ಏಳುವುದೇ ಇಲ್ಲ. ಇನ್ನೊಂದು ನಾಯಿ ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಅದು ಸೋಲುತ್ತದೆ.
ಇದನ್ನು ನೋಡಿದಾಗ ಬಹುಶಃ ನಾಯಿ ಸತ್ತು ಹೋಗಿದೆ ಎಂದೇ ಅಂದುಕೊಳ್ಳುವಂತಿದೆ. ಆದರೆ ನಂತರ ಮನುಷ್ಯನೊಬ್ಬ ಬಂದು ನಾಯಿಯ ಕಾಲು ಎಳೆಯುತ್ತಾನೆ. ಆಗ ನಾಯಿ ಹೆದರಿಕೆಯಿಂದ ಎದ್ದೆನೋ ಬಿದ್ದೆನೋ ಎಂದು ಓಡಿದಾಗಲೇ ತಿಳಿಯುವುದು ಅದು ನಾಟಕ ಮಾಡುತ್ತಿತ್ತು ಎಂದು.
ಈ ಕ್ಯೂಟ್ ಮುನಿಸಿನ ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದಿದ್ದು, ಥರಹೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
https://twitter.com/ChannelInteres/status/1637891138567675911?ref_src=twsrc%5Etfw%7Ctwcamp%5Etweetembed%7Ctwterm%5E1637891138567675911%7Ctwgr%5Ed8785e15a5d5661925577b7f58a67e1006b3d09e%7Ctwcon%5Es1_&ref_url=https%3A%2F%2Fwww.news18.com%2Fbuzz%2Fdog-pulls-a-fake-death-prank-on-friend-the-next-scene-will-make-you-rofl-7357675.html