ಮಕ್ಕಳಂತೆಯೇ ಎಸ್ಕಲೇಟರ್‌ ಹತ್ತಿ-ಇಳಿದು ಆಡಿದ ನಾಯಿಮರಿ: ಇಲ್ಲಿದೆ ಕ್ಯೂಟ್‌ ವಿಡಿಯೋ

ಮಕ್ಕಳಂತೆಯೇ ಪ್ರಾಣಿಗಳ ಮರಿಗಳಿಗೂ ಆಟವಾಡುವುದು ಎಂದರೆ ತುಂಬಾ ಇಷ್ಟ. ಅದರಲ್ಲಿಯೂ ನಾಯಿಮರಿಗಳ ಆಟ ಮಕ್ಕಳಷ್ಟೇ ಕ್ಯೂಟ್‌ ಆಗಿರುತ್ತದೆ. ಅಂಥದ್ದೇ ಒಂದು ಆಟದ ವಿಡಿಯೋ ವೈರಲ್‌ ಆಗಿದೆ.

ಮಾಲ್‌ಗಳಿಗೆ ಹೋದಾಗ ಅಲ್ಲಿರುವ ಎಸ್ಕಲೇಟರ್‌ಗಳ ಮೇಲೆ ಹತ್ತಿ ಇಳಿದು ಆಡುವುದು ಎಂದರೆ ಹಲವು ಮಕ್ಕಳಿಗೆ ಇಷ್ಟ. ಆದರೆ ಇಲ್ಲೊಂದು ಕಡೆ ನಾಯಿ ಮಕ್ಕಳಂತೆಯೇ ಅವುಗಳನ್ನು ಹತ್ತಿ ಇಳಿದು ಆಡಿದೆ. ಅದರ ಕ್ಯೂಟ್‌ ವಿಡಿಯೋ ವೈರಲ್‌ ಆಗಿದೆ.

ಈ ವಿಡಿಯೋ ಎಲ್ಲಿ ತೆಗೆದಿರುವುದು ಎಂದು ತಿಳಿದಿಲ್ಲ. ಆದರೆ ಜನರ ಜೊತೆ ಈ ನಾಯಿ ಎಸ್ಕಲೇಟರ್‌ ಏರಿದೆ. ನಂತರ ಮೇಲೆ ಹೋದಂತೆ ಓಡಿ ಹೋಗಿ ಚಿಕ್ಕ ಮಕ್ಕಳಂತೆಯೇ ಪಕ್ಕದಲ್ಲಿನ ಮೆಟ್ಟಿಲುಗಳನ್ನು ಇಳಿದು ಪುನಃ ಪಕ್ಕಕ್ಕೆ ಬಂದು ಎಸ್ಕಲೇಟರ್‌ ಮೇಲೆ ಏರಿದೆ. ಈ ಚಿಕ್ಕ ವಿಡಿಯೋ ನೋಡಿದ ಜನರು ಫಿದಾ ಆಗಿದ್ದಾರೆ.

https://twitter.com/ViralPosts5/status/1624827479021195265?ref_src=twsrc%5Etfw%7Ctwcamp%5Etweetembed%7Ctwterm

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read