alex Certify ಸೊಳ್ಳೆ-ಜಿರಳೆ-ತಿಗಣೆಗಳನ್ನು ಮನೆಯಿಂದ ಓಡಿಸಬೇಕಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಳ್ಳೆ-ಜಿರಳೆ-ತಿಗಣೆಗಳನ್ನು ಮನೆಯಿಂದ ಓಡಿಸಬೇಕಾ……?

ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ ಇನ್ನೊಂದು ಕೀಟ ಕಾಣಿಸುತ್ತೆ ಎಂಬ ಚಿಂತೆ ಮಹಿಳೆಯರದ್ದು. ಜಿರಳೆ, ಸೊಳ್ಳೆ, ತಿಗಣೆಯನ್ನು ಮನೆಯಿಂದ ಓಡಿಸಲು ಈ ಸುಲಭ ಉಪಾಯಗಳನ್ನು ನೀವು ಪ್ರಯೋಗ ಮಾಡಬಹುದಾಗಿದೆ.

ಜಿರಳೆ: ಹೆಚ್ಚಿನವರು, ಅದ್ರಲ್ಲೂ ಮಹಿಳೆಯರು ಜಿರಳೆ ಕಂಡ್ರೆ ಭಯಗೊಳ್ತಾರೆ. ಜಿರಳೆಯಿಂದ ನೆಮ್ಮದಿ ಪಡೆಯಲು ಏನು ಮಾಡೋದು ಎನ್ನುವವರು ಈ ಸರಳ ಮದ್ದು  ಬಳಸಿ, ಜಿರಳೆಯನ್ನು ಓಡಿಸಬಹುದು. ಬೆಳ್ಳುಳ್ಳಿ, ಈರುಳ್ಳಿ ಹಾಗೂ ಕೆಂಪು ಮೆಣಸನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿಕೊಳ್ಳಿ. ನಂತ್ರ ಇದಕ್ಕೆ ಸ್ವಲ್ಪ ನೀರು ಬಾಟಲಿಗೆ ಹಾಕಿ. ಈ ಮಿಶ್ರಣವನ್ನು ಜಿರಳೆ ಹೆಚ್ಚಿರುವ ಜಾಗಕ್ಕೆ ಸಿಂಪಡಿಸಿ. ನಿಯಮಿತ ರೂಪದಲ್ಲಿ ಇದನ್ನು ಮಾಡುವುದರಿಂದ ಬೇಗ ನೀವು ಜಿರಳೆ ಕಾಟದಿಂದ ನೆಮ್ಮದಿ ಕಾಣಬಹುದಾಗಿದೆ.

ಸೊಳ್ಳೆ: ಬೆಳ್ಳುಳ್ಳಿಯ ಕೆಟ್ಟ ವಾಸನೆ ಸೊಳ್ಳೆಗಳನ್ನು ಮನೆ ಪ್ರವೇಶ ಮಾಡದಂತೆ ತಡೆಯುತ್ತವೆ. ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಿ. ಆ ನೀರನ್ನು ಸೊಳ್ಳೆಯಿಂದ ಮುಕ್ತವಾಗಿಡಬೇಕೆಂದಿರುವ ಜಾಗಕ್ಕೆ ಸಿಂಪಡಿಸಿ. ರೂಂನಲ್ಲಿ ಬೆಳ್ಳುಳ್ಳಿ ವಾಸನೆ ಹರಡಬಹುದು. ಆದ್ರೆ ಸೊಳ್ಳೆಗಳು ಮಾತ್ರ ಇರೋದಿಲ್ಲ.

ತಿಗಣೆ : ಮನೆಯಿಂದ ತಿಗಣೆಯೋಡಿಸುವುದು ಬಹಳ ಸುಲಭ. ಈರುಳ್ಳಿ ರಸವನ್ನು ಸಿದ್ಧಪಡಿಸಿಕೊಳ್ಳಿ. ಅದನ್ನು ಸ್ಪ್ರೇ ಮಾಡುವ ಬಾಟಲಿಗೆ ಹಾಕಿ ತಿಗಣೆಯಿರುವ ಜಾಗಕ್ಕೆ ಸಿಂಪಡಿಸಿ. ಈರುಳ್ಳಿ ವಾಸನೆಗೆ ತಿಗಣೆ ಸಾವನ್ನಪ್ಪುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...