ಟೊಮೆಟೋವನ್ನು ಇಷ್ಟಪಡದೇ ಇರುವವರು ಬಹಳ ಅಪರೂಪ. ಪ್ರತಿ ಮನೆಯಲ್ಲೂ ನಿತ್ಯದ ಅಡುಗೆಗೆ ಟೊಮೆಟೋ ಬಳಸ್ತಾರೆ. ಟೊಮೆಟೋ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅವುಗಳನ್ನು ಅತಿಯಾಗಿ ಸೇವಿಸುವುದರಿಂದ ತೊಂದರೆಯೂ ಆಗುತ್ತದೆ.
ಅತಿಯಾಗಿ ಟೊಮೆಟೊ ಸೇವಿಸುವುದರಿಂದ ಆರೋಗ್ಯ ಕೆಡುತ್ತದೆ. ಟೊಮೆಟೋ ಹಣ್ಣಿನಲ್ಲಿ ಎಂಟಿ ಒಕ್ಸಿಡೆಂಟ್ಗಳು, ವಿಟಮಿನ್ಗಳು ಮತ್ತು ಪೊಟ್ಯಾಸಿಯಮ್ನಂತಹ ಅನೇಕ ಪೋಷಕಾಂಶಗಳಿವೆ. ಟೊಮೆಟೊವನ್ನು ಅತಿಯಾಗಿ ಸೇವಿಸುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ನೋಡೋಣ.
ಅಸಿಡಿಟಿ: ಟೊಮೆಟೊದಲ್ಲಿ ಉತ್ತಮ ಪ್ರಮಾಣದಲ್ಲಿ ವಿಟಮಿನ್-ಸಿ ಇದೆ. ಹಾಗಾಗಿಯೇ ಟೊಮೆಟೊ ಆಮ್ಲೀಯ ಗುಣವನ್ನು ಹೊಂದಿದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಟೊಮೆಟೊಗಳ ಅತಿಯಾದ ಸೇವನೆಯನ್ನು ತಪ್ಪಿಸಬೇಕು.
ಗ್ಯಾಸ್ಟ್ರಿಕ್: ಗ್ಯಾಸ್ ಸಮಸ್ಯೆ ಇರುವವರು ಟೊಮ್ಯಾಟೊವನ್ನು ಮಿತವಾಗಿ ಸೇವಿಸುವುದು ಉತ್ತಮ. ಏಕೆಂದರೆ ಟೊಮೆಟೊಗಳು ಹೊಟ್ಟೆಯಲ್ಲಿ ಗ್ಯಾಸ್ ರಚನೆಗೆ ಕಾರಣವಾಗಬಹುದು.
ಕಿಡ್ನಿ ಕಲ್ಲು: ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಟೊಮೆಟೊ ತಿನ್ನಬಾರದು. ಏಕೆಂದರೆ ಟೊಮೆಟೊ ಬೀಜಗಳಿಂದ ಕಲ್ಲುಗಳ ಸಮಸ್ಯೆ ಹೆಚ್ಚಾಗಬಹುದು. ಟೊಮೆಟೊಗಳನ್ನು ಸೇವಿಸುವ ಮುನ್ನ ಬೀಜಗಳನ್ನು ಪ್ರತ್ಯೇಕಿಸಿ.
ಎದೆಯುರಿ: ಟೊಮೆಟೊವನ್ನು ಹೆಚ್ಚು ಸೇವಿಸಿದರೆ ಎದೆಯುರಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಟೊಮೆಟೊದಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಗ್ಯಾಸ್ ಸೃಷ್ಟಿಸುತ್ತದೆ. ಎದೆಯುರಿ ಕೂಡ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಟೊಮೆಟೋವನ್ನು ಮಿತವಾಗಿ ಬಳಸಿ.