ತೂಕ ಹೆಚ್ಚಳವಾಗುವುದು ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ.
ಈ ತೂಕವನ್ನು ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ಅದಕ್ಕಾಗಿ, ವ್ಯಾಯಾಮ, ಡಯೆಟ್ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ತೂಕ ಹೆಚ್ಚಳ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತಿದೆ. ಇದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳಿ.
ತೂಕ ಹೆಚ್ಚಳ ಸಮಸ್ಯೆ ಮಹಿಳೆಯರಲ್ಲಿಯೇ ಹೆಚ್ಚು ಕಂಡು ಬರುತ್ತಿದೆ. ಹಾಗೂ ಮಹಿಳೆಯರಿಗಿಂತ ಪುರುಷರು ಬೇಗ ತಮ್ಮ ತೂಕವನ್ನು ಇಳಿಸಿಕೊಳ್ಳುತ್ತಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಸಂಶೋಧಕರು 300ಹೆಚ್ಚು ಮಹಿಳೆಯರು ಹಾಗೂ ಪುರುಷರ ಮೇಲೆ ಈ ಪ್ರಯೋಗವನ್ನು ಮಾಡಿದ್ದು, ಇದರಲ್ಲಿ ಮಹಿಳೆಯರಿಗಿಂತ ಪುರುಷರು ಬೇಗ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪುರುಷರು ಮಹಿಳೆಯರಿಗಿಂತ ಎತ್ತರ ಮತ್ತು ಹೆಚ್ಚು ಸ್ನಾಯುಗಳನ್ನು ಹೊಂದಿರುತ್ತಾರೆ. ಈ ಕಾರಣಕ್ಕೆ ಪ್ರತಿದಿನ ಅವರಿಗೆ ಹೆಚ್ಚಿನ ಕ್ಯಾಲೋರಿ ಬೇಕಾಗಿದ್ದು, ಹಾಗಾಗಿ ಅವರ ತೂಕ ಹೆಚ್ಚಳವಾಗುವುದಿಲ್ಲ. ಒಂದು ವೇಳೆ ತೂಕ ಹೆಚ್ಚಾದರೂ ಬೇಗ ಇಳಿಸಿಕೊಳ್ಳಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.