ಮನೆಯ ಸದಸ್ಯರು ಮತ್ತು ಅತಿಥಿಗಳಿಗೆ ಊಟ ಬಡಿಸುವುದು ಸನಾತನ ಧರ್ಮದ ಸಂಪ್ರದಾಯ. ಊಟ ಬಡಿಸಲು ಕೂಡ ಅನೇಕ ನಿಯಮಗಳಿವೆ. ಮೂರು ರೊಟ್ಟಿ, ಚಪಾತಿ ಅಥವಾ ದೋಸೆಯನ್ನು ತಟ್ಟೆಯಲ್ಲಿ ಒಟ್ಟಿಗೆ ಬಡಿಸುವುದಿಲ್ಲ. ಆದರೆ ಇಸ್ಲಾಂನಲ್ಲಿ ಎಲ್ಲಾ ರೊಟ್ಟಿಗಳನ್ನು ತಿನ್ನುವವರ ಮುಂದೆ ಇಡಲಾಗುತ್ತದೆ. ಕೋಟಿಗಟ್ಟಲೆ ಹಿಂದೂಗಳು ಸಾವಿರಾರು ವರ್ಷಗಳಿಂದ ನಿರಂತರವಾಗಿ ಪಾಲಿಸಿಕೊಂಡು ಬಂದಿರುವ ನಿಯಮ ಇದು. ಇದರ ಹಿಂದೆ ಅನೇಕ ಶಾಸ್ತ್ರೀಯ ಮತ್ತು ವೈಜ್ಞಾನಿಕ ಕಾರಣಗಳು ಅಡಗಿವೆ.
ತಟ್ಟೆಯಲ್ಲಿ 3 ರೊಟ್ಟಿಗಳನ್ನು ಒಟ್ಟಿಗೆ ಬಡಿಸಬಾರದು?
ಮೂರು ರೊಟ್ಟಿಗಳನ್ನು ತಟ್ಟೆಯಲ್ಲಿ ಒಟ್ಟಿಗೆ ನೀಡುವುದು ಸತ್ತವರಿಗೆ ಅನ್ನ ನೀಡುವುದಕ್ಕೆ ಸಮಾನವೆಂದು ಪರಿಗಣಿಸಲಾಗುತ್ತದೆ. ಇದರರ್ಥ ವ್ಯಕ್ತಿಯು ಸತ್ತಿದ್ದಾನೆ ಅಥವಾ ಸಾಯಲಿದ್ದಾನೆ ಎಂದು. ಸನಾತನ ಧರ್ಮದಲ್ಲಿ ಒಬ್ಬ ವ್ಯಕ್ತಿಯು ಸತ್ತಾಗ ತ್ರಯೋದಶಿ ಸಂಸ್ಕಾರವನ್ನು ಮಾಡಲಾಗುತ್ತದೆ. ಇದರಲ್ಲಿ ಮೂರು ರೊಟ್ಟಿಗಳನ್ನು ತಟ್ಟೆಯಲ್ಲಿಟ್ಟು ಛಾವಣಿಯ ಮೇಲೆ ಇಡಲಾಗುತ್ತದೆ. ಕಾಗೆ ಮತ್ತಿತರ ಪಕ್ಷಿಗಳು ಇದನ್ನು ತಿನ್ನುತ್ತವೆ. ಸತ್ತವರ ಅಲೆದಾಡುವ ಆತ್ಮವು ಆಹಾರವನ್ನು ತಿನ್ನುವ ಮೂಲಕ ತನ್ನ ಹಸಿವನ್ನು ಪೂರೈಸಿಕೊಂಡು ಮೋಕ್ಷವನ್ನು ಪಡೆಯಲಿ ಎಂಬುದು ಇದರ ಉದ್ದೇಶ.
ಆದರೆ ಮನೆಯಲ್ಲಿ ಈ ರೀತಿ ಒಟ್ಟಿಗೆ 3 ರೊಟ್ಟಿಗಳನ್ನು ಬಡಿಸಿಕೊಂಡು ತಿನ್ನುವುದರಿಂದ ವ್ಯತಿರಿಕ್ತ ಪರಿಣಾಮಗಳಾಗಬಹುದು. ಈ ರೀತಿ ಮಾಡುವುದರಿಂದ ಹಗೆತನದ ಭಾವನೆ ಉಂಟಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗಬಹುದು. ಈ ಒಂದು ತಪ್ಪಿನಿಂದಾಗಿ ಕುಟುಂಬದ ಆರ್ಥಿಕ ಸಂಪನ್ಮೂಲಗಳು ಬತ್ತಿಹೋಗಿ ಕ್ರಮೇಣ ಬಡತನ ಬರಬಹುದು.
ಸನಾತನ ನಂಬಿಕೆಯ ಬಗ್ಗೆ ವಿಜ್ಞಾನ ಹೇಳುವುದೇನು?
ವೈಜ್ಞಾನಿಕ ದೃಷ್ಟಿಕೋನದಿಂದ ಕೂಡ 3 ರೊಟ್ಟಿಯನ್ನು ಒಟ್ಟಿಗೆ ತಿನ್ನುವುದು ಸೂಕ್ತವಲ್ಲ. ಒಮ್ಮೆ 2 ರೊಟ್ಟಿಯನ್ನು ತಿನ್ನಬೇಕು. ರೊಟ್ಟಿಯನ್ನು ನಿತ್ಯ 3ಕ್ಕೆ ಹೆಚ್ಚಿಸಿದರೆ ಬೊಜ್ಜು, ಮಧುಮೇಹ, ಹೊಟ್ಟೆನೋವು, ಹೃದಯಾಘಾತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಬರಬಹುದು.
ತುಂಬಾ ಹಸಿವಾಗಿದ್ದರೆ ಆರಂಭದಲ್ಲಿ 2 ರೊಟ್ಟಿಗಳನ್ನು ತಿನ್ನಬಹುದು ಮತ್ತು ನಂತರ 1 ಹೆಚ್ಚುವರಿ ರೊಟ್ಟಿಯನ್ನು ತೆಗೆದುಕೊಳ್ಳಬಹುದು. ಆದರೆ ತಟ್ಟೆಯಲ್ಲಿ 3 ರೊಟ್ಟಿಗಳನ್ನು ಒಟ್ಟಿಗೆ ಇಡುವುದನ್ನು ತಪ್ಪಿಸಬೇಕು. ಈ ಮೂಲಕ ಆಹಾರ ವ್ಯರ್ಥವಾಗದಂತೆ ಕೂಡ ತಡೆಯಬಹುದು.