‘ದಿಲ್ ಖುಷ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಪ್ರಮೋದ್ ಜಯ ರಚಿಸಿ ನಿರ್ದೇಶಿಸಿರುವ ‘ದಿಲ್ ಖುಷ್’ ಚಿತ್ರದ ಮೂರನೇ ಹಾಡಿನ ಬಿಡುಗಡೆ ಸಮಾರಂಭವನ್ನು ನಿನ್ನೆ ಚಾಮರಾಜಪೇಟೆಯಲ್ಲಿ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ನಿರ್ದೇಶಕರಾದ ಸಿಂಪಲ್ ಸುನಿ, ಪವನ್ ಒಡೆಯರ್ ಹಾಗೂ ಭರ್ಜರಿ ಚೇತನ್ ಆಗಮಿಸಿದ್ದು, ಈ ಹಾಡನ್ನು ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

‘ನೀನೇ ನೀನೇ’ ಎಂಬ ಈ ಹಾಡಿಗೆ ನಿಹಾಲ್ ಮತ್ತು ಆರತಿ ಅಶ್ವಿನ್ ಧ್ವನಿಯಾಗಿದ್ದು, ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದಾರೆ. ಗೌಸ್ ಪೀರ್ ಸಾಹಿತ್ಯವಿದೆ.

ಈ ಚಿತ್ರವನ್ನು ಜಯಪ್ರಭ ಕಲರ್ ಫ್ರೇಮ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ರಂಜಿತ್ ಮತ್ತು ಸ್ಪಂದನ ಸೋಮಣ್ಣ ನಾಯಕ – ನಾಯಕಿಯಾಗಿದ್ದಾರೆ. ಇನ್ನುಳಿದಂತೆ ರಂಗಾಯಣ ರಘು, ಅರುಣ ಬಾಲರಾಜ್, ಧರ್ಮಣ್ಣ ಕಡೂರ್, ಪ್ರವೀಣ ರಾಮನಕೊಪ್ಪ ತೆರೆ ಹಂಚಿಕೊಂಡಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನವಿದ್ದು, ನಿವಾಸ್ ನಾರಾಯಣ್ ಛಾಯಾಗ್ರಹಣವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read