ಜಿಲೇಬಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಜಿಲೇಬಿಗಿಂತ ಮನೆಯಲ್ಲಿ ಮಾಡಿದ ಜಿಲೇಬಿ ಹೆಚ್ಚು ರುಚಿ.
ಕೇಸರಿ ಜಿಲೇಬಿ ಮಾಡಲು ಬೇಕಾಗುವ ಪದಾರ್ಥ :
ಮೈದಾ ಹಿಟ್ಟು – 1 ಕಪ್
ಕಸ್ಟರ್ಡ್ ಪೌಡರ್ – 2 ಟೀ ಚಮಚ
ಬೇಕಿಂಗ್ ಪೌಡರ್ – 1/4 ಚಮಚ
ಮೊಸರು – 2 ಚಮಚ
ವಿನೆಗರ್ – 1/2 ಚಮಚ
ಜಿಲೇಬಿ ಬಣ್ಣ – 1/4 ಚಮಚ
ಅಗತ್ಯವಿರುವಷ್ಟು ನೀರು
ಪಿಸ್ತಾ – 1 ಚಮಚ
ಆಹಾರದ ಬಣ್ಣ 2 ಹನಿ
ಕೇಸರಿ – ಒಂದು ಪಿಂಚ್
ತುಪ್ಪ – 3 ಚಮಚ
ಸಕ್ಕರೆ – 3 ಕಪ್
ಕೇಸರಿ ಜಿಲೇಬಿ ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಕಸ್ಟರ್ಡ್ ಪೌಡರ್, ಬೇಕಿಂಗ್ ಪೌಡರ್, ಮೊಸರು, ವಿನೆಗರ್, ಜಲೇಬಿ ಬಣ್ಣ ಮತ್ತು ನೀರನ್ನು ಸೇರಿಸಿ ದಪ್ಪವಾದ ಬ್ಯಾಟರ್ ಮಾಡಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮಿಶ್ರಣವನ್ನು ಪೈಪಿಂಗ್ ಬ್ಯಾಗ್‌ನಲ್ಲಿ ಹಾಕಿ ಜಲೇಬಿ ಆಕಾರಕ್ಕೆ ಹಾಕಿ ಫ್ರೈ ಮಾಡಿ.
ಸಕ್ಕರೆಯನ್ನು ಪ್ರತ್ಯೇಕ ಬಾಣಲೆಯಲ್ಲಿ ಬಿಸಿ ಮಾಡಿ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ. ಜಿಲೇಬಿಯನ್ನು ತೆಗೆದು ಅದಕ್ಕೆ ಕೇಸರಿ ಹಾಕಿ ನಂತ್ರ ಸಕ್ಕರೆ ಪಾಕಕ್ಕೆ ಹಾಕಿ. ಜಲೇಬಿಯನ್ನು ಪಾಕದಲ್ಲಿ 2 ರಿಂದ 3 ನಿಮಿಷಗಳ ಕಾಲ ಅದ್ದಿ. ಜಿಲೇಬಿ ಮೇಲೆ ಪಿಸ್ತಾ ಹಾಕಿ ಅಲಂಕರಿಸಿ, ಸರ್ವ್ ಮಾಡಿ.