ದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಲ್ಲಿರುತ್ತದೆ. ಅನೇಕ ಪ್ರತಿಭಾವಂತರು ಮೆಟ್ರೋದಲ್ಲಿ ಕಾಣಸಿಗುತ್ತಿರುತ್ತಾರೆ. ಮೆಟ್ರೋದಲ್ಲಿ ನೃತ್ಯ ಮಾಡುತ್ತಾ ಉಳಿದ ಪ್ರಯಾಣಿಕರನ್ನು ರಂಜಿಸುತ್ತಿರುವುದು ಮಾಮೂಲಿಯಾಗಿದೆ. ಇದೀಗ ವೈರಲ್ ಆಗಿರೋ ವಿಡಿಯೋ ಕೂಡ ಖಂಡಿತಾ ನಿಮ್ಮನ್ನು ರಂಜಿಸುತ್ತದೆ.
ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ ‘ಚೋಲಿ ಕೆ ಪೀಚೆ ಕ್ಯಾ ಹೈ’ ಹಾಡಿಗೆ ವ್ಯಕ್ತಿಯೊಬ್ಬ ವಿಲಕ್ಷಣವಾಗಿ ಕುಣಿದಿದ್ದಾನೆ. ಇನ್ನೊಬ್ಬ ವ್ಯಕ್ತಿ ಅದನ್ನು ರೆಕಾರ್ಡ್ ಮಾಡಿದ್ದಾನೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ ಡಿಎಂಆರ್ಸಿ ಮಾತ್ರ, ಮೆಟ್ರೋದಲ್ಲಿ ಕುಚೇಷ್ಟೆ, ನೃತ್ಯ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ನಿಯಮಗಳನ್ನು ಹೊರತಂದಿದ್ದರೂ ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.
ವಿಡಿಯೋದಲ್ಲಿ, ನೃತ್ಯ ಮಾಡಿದ ವ್ಯಕ್ತಿಯು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಖಳನಾಯಕ್ ಚಿತ್ರದ ಹಾಡಿಗೆ ವಿಚಿತ್ರವಾಗಿ ನೃತ್ಯ ಮಾಡಿದ್ದಾನೆ. ಆತನ ನೃತ್ಯ ನೋಡಿ ಸಹ ಪ್ರಯಾಣಿಕರು ನಗಲು ಪ್ರಾರಂಭಿಸಿದ್ರು. ಕ್ಯಾಮರಾದ ಹಿಂದೆ ಇದ್ದ ಜನರು ಅವನ ನೃತ್ಯ ಶೈಲಿಯನ್ನು ಬದಲಾಯಿಸುವಂತೆ ಕೇಳಿದ್ದಾರೆ. ಮತ್ತೊಬ್ಬರು ಬೆಲ್ಲಿ ಡಾನ್ಸ್ ಮಾಡಲು ವಿನಂತಿಸುತ್ತಾರೆ.
ಡಿಯು ಅಪ್‌ಡೇಟ್ಸ್ ಎಂಬ ಇನ್‌ಸ್ಟಾಗ್ರಾಮ್ ಪುಟವು ದೆಹಲಿ ಮೆಟ್ರೋ ದೃಶ್ಯಗಳು ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ವಿಡಿಯೋ ಹಂಚಿಕೊಂಡಾಗಿನಿಂದ ಇದಕ್ಕೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ಸ್ ಗಳು ಸಂಗ್ರಹಗೊಂಡಿವೆ. ಹೆಚ್ಚಿನ ಬಳಕೆದಾರರು ವ್ಯಕ್ತಿಯ ಕಾರ್ಯಕ್ಷಮತೆಯ ಮೇಲೆ ಹಾಸ್ಯ ಚಟಾಕಿ ಹಾರಿಸಿದರೆ, ಇತರರು ಮೆಟ್ರೋದಲ್ಲಿ ನೃತ್ಯ ಮಾಡಿದ್ದಕ್ಕಾಗಿ ಟೀಕಿಸಿದರು.