ಬಿಜೆಪಿ ನಾಯಕ ವಿಜಯ್ ಗೋಯೆಲ್ ಯುವತಿಗೆ ಥಳಿಸಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಿಂದ ಅವರು ಮತ್ತೊಂದು ಹೊಸ ವಿವಾದಕ್ಕೆ ಸಿಲುಕಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀದಿನಾಯಿಗಳ ಸಮಸ್ಯೆ ಬಗ್ಗೆ ಧ್ವನಿಯೆತ್ತಿರುವ ಅವರು ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮಾತುಗಳನ್ನ ಯುವತಿಯೊಬ್ಬರು ರೆಕಾರ್ಡ್ ಮಾಡುತ್ತಿದ್ದರು.
ನಾಯಿಗಳಿಗೆ ಆಹಾರ ನೀಡಬೇಡಿ ಎಂದು ವಿಜಯ್ ಗೋಯೆಲ್ ಜನರಿಗೆ ಹೇಳುತ್ತಿದ್ದಾಗ ಅದನ್ನ ವಿರೋಧಿಸಿ ಮಹಿಳೆಯೊಬ್ಬರು ಧ್ವನಿಯೆತ್ತುತ್ತಾರೆ. ಈ ವೇಳೆ ಗೋಯೆಲ್ ಅವರ ಪ್ರಶ್ನೆಗೆ ಉತ್ತರಿಸುವಾಗ ಜನರಿಗೆ ಸುಮ್ಮನಿರಿ ಎಂದು ಹೇಳುತ್ತಾರೆ. ಇದನ್ನ ಯುವತಿಯೊಬ್ಬರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿರುತ್ತಾರೆ.
ಈ ವೇಳೆ ನೀವು ಯಾಕೆ ರೆಕಾರ್ಡಿಂಗ್ ಮಾಡುತ್ತಿದ್ದೀರಿ? ಎಂದು ವಿಜಯ್ ಗೋಯೆಲ್ ಪ್ರಶ್ನಿಸುತ್ತಾರೆ. ಕೆಲ ಕಾಲ ಇಬ್ಬರ ನಡುವೆ ವಾಗ್ವಾದ ನಡೆದು ಯುವತಿಯಿಂದ ಮೊಬೈಲ್ ಕಸಿಯಲು ಪ್ರಯತ್ನಿಸುತ್ತಾರೆ. ಈ ವೇಳೆ ಯುವತಿಗೆ ಅವರು ಹೊಡೆದರಾ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಈ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ.
https://twitter.com/scribe_prashant/status/1665566899143577600?ref_src=twsrc%5Etfw%7Ctwcamp%5Etweetembed%7Ctwterm%5E1665566899143577600%7Ctwgr%5E40044d65693a38418d83534ceed382a1046cc107%7Ctwcon%5Es1_&ref_url=https%3A%2F%2Fwww.freepressjournal.in%2Findia%2Fwatch-vijay-goel-loses-cool-snatches-mobile-phone-from-a-girls-hand-during-discussion-on-stray-dogs