ಲಿವ್ ಇನ್ ಸಂಗಾತಿಯಿಂದಲೇ ಹತ್ಯೆಯಾಗಿ ಫ್ರಿಡ್ಜ್ ನಲ್ಲಿ ಶವವಾಗಿ ಪತ್ತೆಯಾದವಳ ತಂದೆಗೆ ವಿಷಯವೇ ಗೊತ್ತಿರಲಿಲ್ಲ….!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶ್ರದ್ಧಾ ವಾಕರ್ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, 22 ವರ್ಷದ ನಿಕ್ಕಿ ಯಾದವ್ ಎಂಬ ಯುವತಿಯನ್ನು ಆಕೆಯ ಲಿವ್ ಇನ್ ಸಂಗಾತಿ ಸಾಹಿಲ್ ಗೆಹ್ಲೋಟ್ ಎಂಬಾತ ಹತ್ಯೆ ಮಾಡಿ ಫ್ರಿಡ್ಜ್ ನಲ್ಲಿ ಶವವನ್ನು ಇಟ್ಟಿದ್ದ.

ಅಚ್ಚರಿಯ ಸಂಗತಿ ಎಂದರೆ ನಿಕ್ಕಿ ಯಾದವ್ ತಂದೆಗೆ ತನ್ನ ಪುತ್ರಿಯ ಲಿವ್ ಇನ್ ಸಂಬಂಧದ ವಿಷಯವೇ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ತಮ್ಮ ಮಗಳು ತನ್ನ ಸಂಗಾತಿಯಿಂದ ಕೊಲೆಯಾಗಿದ್ದಾಳೆ ಎಂಬ ವಿಚಾರ ದೆಹಲಿ ಪೊಲೀಸರು ಸಂಪರ್ಕಿಸಿ ಮಾಹಿತಿ ನೀಡಿದಾಗಲೇ ಅವರಿಗೆ ವಿಚಾರ ಗೊತ್ತಾಗಿದೆ.

ಫೆಬ್ರವರಿ 10ರಂದು ಗೋವಾ ಪ್ರವಾಸಕ್ಕೆ ನಿಕ್ಕಿ ಯಾದವ್ ತೆರಳಲು ಸಿದ್ಧವಾಗಿದ್ದಳು ಎನ್ನಲಾಗಿದ್ದು, ಆದರೆ ಸಾಹಿಲ್ ತನ್ನನ್ನು ವಂಚಿಸಿ ಮತ್ತೊಬ್ಬಳನ್ನು ಮದುವೆಯಾಗುತ್ತಿದ್ದಾನೆ ಎಂಬ ಮಾಹಿತಿ ತಿಳಿದ ಬಳಿಕ ಗೋವಾ ಪ್ರವಾಸವನ್ನು ರದ್ದುಗೊಳಿಸಿದ್ದಳು.

ಫೆಬ್ರವರಿ 9ರ ಮಧ್ಯರಾತ್ರಿ ನಿಕ್ಕಿ ಯಾದವ್ ಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಸಾಹಿಲ್ ಗೆಹ್ಲೋಟ್, ಮೊಬೈಲ್ ಚಾರ್ಜರ್ ವೈರ್ ನಿಂದ ಆಕೆಗೆ ಕತ್ತು ಬಿಗಿದು ಹತ್ಯೆ ಮಾಡಿದ್ದ. ಬಳಿಕ ಶವವನ್ನು ಫ್ರಿಡ್ಜ್ ನಲ್ಲಿ ಇರಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read