ಶಿವಮೊಗ್ಗ: ಬಜಾಜ್ ಕವಾಸಕಿ ಬೈಕ್ ಅನ್ನು ಯಮಹಾ ಬೈಕ್ ರೀತಿ ಕಾಣುವಂತೆ ಮಾರ್ಪಾಡು ಮಾಡಿಸಿದ್ದ ಯುವಕನಿಗೆ ಶಿವಮೊಗ್ಗದ ಮೂರನೇ ಎಸಿಜೆಎಂಎಫ್ ನ್ಯಾಯಾಲಯ 16,500 ರೂಪಾಯಿ ದಂಡ ವಿಧಿಸಿದೆ.
ಶಿವಮೊಗ್ಗದ ಆರ್‌ಎಂಎಲ್ ನಗರದ ಧನಂಜಯ(19) ತನ್ನ ಕವಾಸಕಿ ಬಜಾಜ್ ಬೈಕ್ ಅನ್ನು ಯಮಹಾ ಆರ್.ಎಕ್ಸ್. ರೀತಿ ಕಾಣುವಂತೆ ಮಾರ್ಪಾಡು ಮಾಡಿಕೊಂಡು ಅದಕ್ಕೆ ಕರ್ಕಶ ಶಬ್ದದ ಹಾರ್ನ್ ಅಳವಡಿಸಿಕೊಂಡು ಚಾಲನೆ ಮಾಡುತ್ತಿದ್ದ.
ಈ ಬಗ್ಗೆ ಸಾರ್ವಜನಿಕರು ಸಂಚಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಶಿವಮೊಗ್ಗ ಪೂರ್ವ ಸಂಚಾರ ಠಾಣೆ ಪೊಲೀಸರು ಬೈಕ್ ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಆರಿಸಿದ ನ್ಯಾಯಾಧೀಶರು ಆರೋಪಿಗೆ ದಂಡ ವಿಧಿಸಿದ್ದಾರೆ.