ಬೆಂಗಳೂರು: 2023 ನೇ ಸಾಲಿನ ಸ್ನಾತಕೋತ್ತರ ಯೋಗ, ಆಯುರ್ವೇದ, ನ್ಯಾಚುರೋಪತಿ, ಯುನಾನಿ, ಹೋಮಿಯೋಪತಿ ಕೋರ್ಸ್ ಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ.
ಅಖಿಲ ಭಾರತ ಮಟ್ಟದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಅಕ್ಟೋಬರ್ 30 ರಿಂದ ಆನ್ಲೈನ್ ಮೂಲಕ ನೋಂದಾಯಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
ಸರ್ಕಾರದ ಆದೇಶದ ಅನ್ವಯ ಪ್ರಾಧಿಕಾರದಿಂದ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಕೇಂದ್ರ ಸರ್ಕಾರಿ ಕೋಟಾದಡಿ ಮೀಸಲಿರುವ ಶೇಕಡಾ 15 ರಷ್ಟು ಸೀಟು ಹೊರತುಪಡಿಸಿ ಉಳಿದ ಶೇಕಡ 85ರಷ್ಟು, ಖಾಸಗಿ ಕಾಲೇಜುಗಳ ಶೇಕಡ 100ರಷ್ಟು ಸೀಟುಗಳ ಹಂಚಿಕೆ ನಡೆಸಲಿದೆ.
ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 30ರ ಬೆಳಿಗ್ಗೆ 11 ರಿಂದ ನವೆಂಬರ್ 2ಡರ ಮಧ್ಯರಾತ್ರಿಯವರೆಗೆ ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 3ರೊಳಗೆ 2,000 ರೂ. ನೋಂದಣಿ ಶುಲ್ಕ ಪಾವತಿಸಬೇಕು. ಮಾಹಿತಿಗಾಗಿ ಪ್ರಾಧಿಕಾರದ http://kea.kar.nic.in ವೆಬ್ಸೈಟ್ ಗಮನಿಸಬಹುದಾಗಿದೆ.