ತಂಪು ಪಾನೀಯ ಸೇವಿಸಿದ್ದ ಮಗು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಬೆಂಗಳೂರು: ತಂಪು ಪಾನೀಯ ಕುಡಿದು ಮಗು ಅಸ್ವಸ್ಥವಾಗಿರುವ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ನಡೆದಿದೆ. ಮಗು ತಂಪು ಪಾನೀಯ ಸೇವಿಸಿ ತೀವ್ರ ಅಸ್ವಸ್ಥವಾಗಿರುವ ವಿಡಿಯೋ ವೈರಲ್ ಆಗಿದೆ.

ಮಗು ಅಸ್ವಸ್ಥಗೊಂಡ ಬಳಿಕ ಪೋಷಕರು ತಂಪು ಪಾನೀಯದ ಪ್ಯಾಕೆಟ್ ಪರಿಶೀಲಿಸಿದ್ದಾರೆ. ಈ ವೇಳೆ ಪ್ಯಾಕೆಟ್ ನಲ್ಲಿ ಕಪ್ಪು ಬಣ್ಣ ಮಿಶ್ರಣಗೊಂಡಿರುವುದು ಪತ್ತೆಯಾಗಿದೆ. ಇದರ ಪರಿಣಾಮವೇ ಮಗು ಅಸ್ವಸ್ಥಗೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಸದ್ಯ ಮಗು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ತಂಪು ಪಾನೀಯ ಗುಣಮಟ್ಟ ಪರೀಕ್ಷೆಗೆ ರವಾನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read