alex Certify ಕಬ್ಬಿಣದ ಪಾತ್ರೆಯಲ್ಲಿ ಈ ಆಹಾರಗಳನ್ನು ತಯಾರಿಸುವುದು ಆರೋಗ್ಯಕ್ಕೆ ಹಾನಿಕರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಬ್ಬಿಣದ ಪಾತ್ರೆಯಲ್ಲಿ ಈ ಆಹಾರಗಳನ್ನು ತಯಾರಿಸುವುದು ಆರೋಗ್ಯಕ್ಕೆ ಹಾನಿಕರ….!

ವಿವಿಧ ರೀತಿಯ ಅಡುಗೆಗಳನ್ನು ಹೆಚ್ಚಾಗಿ ಕಬ್ಬಿಣದ ಪಾತ್ರೆಗಳನ್ನು ಬಳಸಿ ಮಾಡುತ್ತಾರೆ . ಆದರೆ ಎಲ್ಲಾ ಆಹಾರಗಳನ್ನು ಇದರಲ್ಲಿ ತಯಾರಿಸುವುದರಿಂದ ಕೆಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಕಬ್ಬಿಣದ ಪಾತ್ರೆಯಲ್ಲಿ ತಯಾರಿಸಬೇಡಿ.

*ಮೀನು : ಮೀನಿನಲ್ಲಿ ಜಿಗುಟಾದ ಮತ್ತು ಹೆಚ್ಚುವರಿ ಎಣ್ಣೆಯಂಶವಿರುವುದರಿಂದ ಇದನ್ನು ಕಬ್ಬಿಣದ ಪಾತ್ರೆಯಲ್ಲಿ ಬೇಯಿಸಿದಾಗ ಅದು ಪಾತ್ರೆಗೆ ಅಂಟಿಕೊಳ್ಳುತ್ತದೆ. ಇದರಿಂದ ಮೀನು ಅಲ್ಲೇ ಸುಟ್ಟು ಹೋಗುವ ಸಂಭವವಿದೆ. ಹಾಗಾಗಿ ಕಬ್ಬಿಣದ ಪಾತ್ರೆಯಲ್ಲಿ ಮೀನಿನ ಅಡುಗೆ ತಯಾರಿಸಬೇಡಿ.

*ಕಬ್ಬಿಣದ ತವಾದಲ್ಲಿ ಕೆಲವರು ಆಮ್ಲೆಟ್ ಮಾಡುತ್ತಾರೆ. ಆದರೆ ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಮತ್ತು ತುಂಬಾ ವಾಸನೆ ಬರುತ್ತದೆಯಂತೆ.

*ಕಬ್ಬಿಣದ ಪಾತ್ರೆಯಲ್ಲಿ ಸಿಹಿ ತಿಂಡಿಗಳನ್ನು ತಯಾರಿಸಬೇಡಿ. ಇದು ಸಿಹಿ ತಿಂಡಿಯನ್ನು ಹಾಳು‌ ಮಾಡುತ್ತದೆ. ಹಾಗೇ ಕಬ್ಬಿಣದ ಪಾತ್ರೆಯಲ್ಲಿ ಚೀಸ್ ಬಳಸಿ ಆಹಾರವನ್ನು ತಯಾರಿಸಬೇಡಿ.

*ಕಬ್ಬಿಣದ ಪಾತ್ರೆಯಲ್ಲಿ ನಿಂಬೆ, ಟೊಮೆಟೊ, ವಿನೆಗರ್ ನಂತಹ ಆಮ್ಲೀಯ ಆಹಾರಗಳ ಅಡುಗೆಗಳನ್ನು ತಯಾರಿಸಬೇಡಿ. ಇದರಿಂದ ಅದರಲ್ಲಿರುವ ತುಕ್ಕಿನ ಅಂಶ ಆಹಾರದಲ್ಲಿ ಸೇರಿಕೊಂಡು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...