ಬೆಂಗಳೂರು: ಬಿಜೆಪಿ-ಜೆಡಿಎಸ್ ನಾಯಕರು ಮಹಿಳೆಯರನ್ನು ವಿಕಾರ ದೃಷ್ಟಿಯಿಂದ ನೋಡುತ್ತಾರೆ ಎಂದು ಕಿಡಿಕಾರಿರುವ ರಾಜ್ಯ ಕಾಂಗ್ರೆಸ್ ಘಟಕ ಸಾಲು ಸಾಲು ಪ್ರಕರಣಗಳ ಪಟ್ಟಿ ಬಿಡುಗಡೆ ಮಾಡಿದೆ.
ಮಹಿಳಾ ಸಮುದಾಯವನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿಕಾರ ದೃಷ್ಟಿಯಿಂದ ನೋಡುತ್ತವೆ ಎನ್ನುವುದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ.
• ಬಿಜೆಪಿಯ ಮಾದುಸ್ವಾಮಿ ರೈತ ಮಹಿಳೆಗೆ ರಾಸ್ಕಲ್ ಎಂದಿದ್ದರು
• ಅರವಿಂದ್ ಲಿಂಬಾವಳಿ ಮಹಿಳೆಯೊಬ್ಬರ ಮೇಲೆ ಅವಾಚ್ಯವಾಗಿ ನಿಂದಿಸಿ ದೌರ್ಜನ್ಯ ಎಸಗಿದ್ದರು
• ಶಾಸಕ ಸಿದ್ದು ಸವದಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಗರ್ಭಪಾತಕ್ಕೆ ಕಾರಣವಾಗಿದ್ದರು
• ರಮೇಶ್ ಜಾರಕಿಹೊಳಿ ಉದ್ಯೋಗ ಕೇಳಿ ಬಂದ ಹೆಣ್ಣುಮಗಳನ್ನು ಬಳಸಿಕೊಂಡಿದ್ದರು
• ಶಿವಮೊಗ್ಗ ಜಿಲ್ಲೆಯ ಶಾಸಕರೊಬ್ಬರು ಸ್ನೇಹಿತನ ಪತ್ನಿಗೆ ಅತ್ಯಾಚಾರ ಎಸಗಿದ್ದರು
• ಬಿಜೆಪಿಯ ಹಿರಿಯ ನಾಯಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ
• ಜೆಡಿಎಸ್ ನ ಕುಮಾರಸ್ವಾಮಿ ಮಹಿಳೆಯೊಬ್ಬರಿಗೆ “ಇಷ್ಟು ದಿನ ಎಲ್ಲಿ ಮಲಗಿದ್ದೆ” ಎಂದಿದ್ದರು
• ಕುಮಾರಸ್ವಾಮಿ “ಮಹಿಳೆಯರು ದಾರಿ ತಪ್ಪಿದ್ದಾರೆ“ ಎಂದಿದ್ದರು
• ಜೆಡಿಎಸ್ ಪಕ್ಷದ ಪ್ರಜ್ವಲ್ ರೇವಣ್ಣನ ಕರ್ಮಕಾಂಡಗಳು ಹೊರಬಂದಿದ್ದವು
• ಜೆಡಿಎಸ್ ಪಕ್ಷದ ರೇವಣ್ಣ ವಿರುದ್ಧ ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಾಗಿದೆ
• ಈಗ ಮುನಿರತ್ನನ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದ ಕರ್ಮಕಾಂಡಗಳು ಹೊರಬಂದಿವೆ.
ಮಹಿಳೆಯರು ಯಾವುದೇ ಕಾರಣಕ್ಕೂ ಬಿಜೆಪಿ, ಜೆಡಿಎಸ್ ಎಂಬ ವಿಕೃತ ಪಕ್ಷಗಳ ಬಳಿ ಸುಳಿಯಬೇಡಿ, ನಿಮ್ಮ ಮಾನ, ಘನತೆ, ಗೌರವ ಉಳಿಸಿಕೊಳ್ಳಿ ಎಂದು ನಾಡಿನ ಮಹಿಳೆಯರಲ್ಲಿ ಕಾಂಗ್ರೆಸ್ ಪಕ್ಷದ ವಿನಂತಿ ಎಂದು ರಾಜ್ಯ ಕಾಂಗ್ರೆಸ್ ಮನವಿ ಮಾಡಿದೆ.