ಬೆಂಗಳೂರು: ಕುರಿ ಮಾಂಸದ ಜೊತೆ ನಾಯಿ ಮಾಂಸ ಬೆರೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಕೆ ಮಾಂಸ ಎಂಬುದು ದೃಢಪಟ್ಟಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ವರದಿ ನೀಡಿದ್ದಾರೆ. ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಆಹಾರ ಇಲಾಖೆ ಪ್ರಕಟಿಸಿದೆ. ಲ್ಯಾಬ್ ರಿಪೋರ್ಟ್ ನಲ್ಲಿ ಮೇಕೆ ಮಾಂಸ ಎನ್ನುವುದು ದೃಢಪಟ್ಟಿದೆ.
ಶಿರೋಹಿ ತಳಿ ಮೇಕೆ ಮಾಂಸ ಎಂದು ವರದಿಯಲ್ಲಿ ಬಹಿರಂಗವಾಗಿದೆ. ನಾಯಿ ಮಾಂಸ ಅಲ್ಲ, ಅದು ಕುರಿ ಮಾಂಸ ಎಂದು ವರದಿ ಬಿಡುಗಡೆಯಾಗಿದೆ. ನಾಯಿ ಮಾಂಸವನ್ನು ತರಿಸಲಾಗುತ್ತದೆ ಎಂದು ಹೋರಾಟಗಾರ ಪುನೀತ್ ಕೆರೆಹಳ್ಳಿ ಗಂಭೀರ ಆರೋಪ ಮಾಡಿದ್ದರು. ನಾಯಿ ಮಾಂಸ ಬೆರೆಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಹೈದರಾಬಾದ್ ಲ್ಯಾಬ್ ಗೆ ಆಹಾರ ಇಲಾಖೆ ಸ್ಯಾಂಪಲ್ ಕಳುಹಿಸಿತ್ತು. ಲ್ಯಾಬ್ ರಿಪೋರ್ಟ್ ನಲ್ಲಿ ಮೇಕೆ ಮಾಂಸ ಎನ್ನುವುದು ದೃಢಪಟ್ಟಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.