ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದನಾಯಂದ್ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ದಯಾನಂದ್, ಹಸಿರು ಪಟಾಕಿಗಳನ್ನು ಮಾತ್ರ ಬಳಕೆ ಮಾಡುವಂತೆ ಸೂಚಿಸಿದ್ದಾರೆ. ಪಟಾಕಿ ಸಿಡಿಸುವಾಗ ಜಾಗೃತೆ ಇರಲಿ. ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಿ. ಯಾವುದೇ ಅನಾಹುತಗಳು ಸಂಭವಿಸಿದಂತೆ ಎಚ್ಚರಿಕೆಯಿಂದ ದೀಪಾವಳಿ ಆಚರಿಸುವಂತೆ ತಿಳಿಸಿದ್ದಾರೆ.
ಅನಾಹುತಗಳನ್ನು ತಪ್ಪಿಸಲು ಸಾರ್ವಜನಿಕರು ಕೆಲ ಸಲಹಾ ಸೂಚನೆಗಳನ್ನು ಅನುಸರಿಸಬೇಕು. ಪಟಾಕಿ ಸಿಡಿಸುವಾಗ ಸಮೀಪಕ್ಕೆ ಹೋಗಿ ನೋಡುವುದು, ನಿಲ್ಲುವುದು ಮಾಡಬೇಡಿ.
ಅನಧಿಕೃತವಾಗಿ ಮಾರಾಟ ಮಾಡುವ ಪಟಾಕಿಗಳನ್ನು ಖರೀದಿ ಮಾಡಬಾರದು. ಅತಿಹೆಚ್ಚು ವಾಯುಮಾಲಿನ್ಯ ಉಂಟುಮಾಡುವಂತಹ ಪಟಾಕಿ ಖರೀದಿಸಬಾರದು
ಹಳೆಯದಾದ ಹಾಗೂ ಹಾಳಾದ ಪಟಾಕಿಗಳ ಬಳಕೆ ಬೇಡ.
ಹಸಿರು ಪಟಾಕಿಗಳನ್ನು ಮಾತ್ರ ಖರಿದಿಸಿ.
ಬೆಳಿಗ್ಗೆ ಸಮಯದಲ್ಲಿ ಪಟಾಕಿ ಸಿಡಿಸಬಾರದು. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದೆ.
ಚಿಕ್ಕಮಕ್ಕಳಿಗೆ ಪಟಾಕಿ ಹಚ್ಚಲು ಅವಕಾಶ ಕೊಡಬಾರದು. ಈ ಬಗ್ಗೆ ಮಕ್ಕಳ ಪೋಷಕರು ಜೊತೆಯಲ್ಲಿದ್ದು ಗಮನಹರಿಸಬೇಕು.
ಪರಿಸರ ಸ್ನೇಹಿ ದೀಪಾಳಿ ಆಚರಿಸಿ. ಸುರಕ್ಷಿತವಾಗಿ ಹಬ್ಬವನ್ನು ಸಂಭ್ರಮಿಸುವಂತೆ ಕರೆ ನೀಡಿದ್ದಾರೆ.