ಮನೆಯ ಸ್ವಚ್ಛತೆಯನ್ನು ಬಾತ್ ರೂಮ್ ನೋಡಿ ಅಳೆಯಲಾಗುತ್ತದೆ. ಬಾತ್ ರೂಮ್ ಸ್ವಚ್ಛವಾಗಿದ್ದರೆ ಮನೆ ಸ್ವಚ್ಛವಾದಂತೆ. ಅನೇಕರು ಬಾತ್ ರೂಮ್ ಸ್ವಚ್ಛ ಮಾಡುವುದು ಕಿರಿಕಿರಿ ಎನ್ನುತ್ತಾರೆ. ಟೈಲ್ಸ್ ನಲ್ಲಿರುವ ಕಲೆ ತೆಗೆಯುವುದು ಕಷ್ಟ ಎನ್ನುವವರಿದ್ದಾರೆ. ಆದ್ರೆ ಸುಲಭವಾಗಿ ಟೈಲ್ಸ್ ಗೆ ಅಂಟಿರುವ ನೀರಿನ ಹಳದಿ ಕಲೆಯನ್ನು ತೆಗೆಯಬಹುದು.
ಬಾತ್ರೂಮ್ ಟೈಲ್ಸ್ ನಲ್ಲಿರುವ ಹಠಮಾರಿ ಕಲೆಗಳನ್ನು ವಿನೆಗರ್ ಮೂಲಕ ತೆಗೆಯಬಹುದು. ಒಂದು ಲೀಟರ್ ನೀರಿಗೆ ಒಂದು ಲೀಟರ್ ವಿನೆಗರ್ ಬೆರೆಸಬೇಕು. ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಬೇಕು. ನಂತ್ರ ಹಳದಿ ಕಲೆಯಿರುವ ಜಾಗಕ್ಕೆ ಸ್ಪ್ರೇ ಮಾಡಬೇಕು. ನಂತ್ರ ಬ್ರೆಷ್ ನಿಂದ ಚೆನ್ನಾಗಿ ಉಜ್ಜಬೇಕು. ಸ್ವಲ್ಪ ಸಮಯದ ನಂತ್ರ ನೀರಿನಿಂದ ಸ್ವಚ್ಛಗೊಳಿಸಬೇಕು.
ನಿಂಬೆ ಹಣ್ಣು ಕೂಡ ಕಲೆ ತೆಗೆಯಲು ಸಹಕಾರಿ. ಇದು ನೈಸರ್ಗಿಕ ಕ್ಲೀನರ್ ಆಗಿದ್ದು, ಆಮ್ಲೀಯ ಗುಣವನ್ನು ಹೊಂದಿದೆ. ಒಂದು ಕಪ್ ನಿಂಬೆ ರಸಕ್ಕೆ, ಎರಡು ಚಮಚ ಉಪ್ಪನ್ನು ಸೇರಿಸಿ. ಬ್ರಷ್ ಸಹಾಯದಿಂದ ಕಲೆಯ ಮೇಲೆ ಹಾಕಿ, 15 ನಿಮಿಷ ಬಿಡಿ. ನಂತ್ರ ಸರಿಯಾಗಿ ಉಜ್ಜಿ, ಸ್ವಚ್ಛಗೊಳಿಸಿ.
ಅಡಿಗೆ ಸೋಡಾ ಕೂಡ ಕ್ಲೀನರ್ ಕೆಲಸ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿಯಾಗಿದೆ. ಅಡಿಗೆ ಸೋಡಾವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 10 ನಿಮಿಷಗಳ ನಂತರ ಸ್ಕ್ರಬ್ ಸಹಾಯದಿಂದ ಉಜ್ಜಿ, ಬೆಚ್ಚಗಿನ ನೀರಿನಲ್ಲಿ ಕ್ಲೀನ್ ಮಾಡಿ.