ಪ್ರೇಮಕ್ಕಾಗಿ ಅತಿರೇಕದ ಪರೀಕ್ಷೆ: ಕರುಳಿನ ಒಂದು ಭಾಗ ಕಳೆದುಕೊಂಡ ಚೀನೀ ಯುವಕ !

ಚೀನಾದಲ್ಲಿ ಪ್ರೀತಿ ಸಾಬೀತು ಮಾಡುವ ವಿಚಿತ್ರ ಪ್ರಯತ್ನವೊಂದು ನಡೆದಿದೆ. ಯುವಕನೊಬ್ಬ ತನ್ನ ಗೆಳತಿಯ ಬೇಡಿಕೆಯಂತೆ ಹೆರಿಗೆ ನೋವಿನ ಸಿಮ್ಯುಲೇಷನ್ ಗೆ ಒಳಗಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

ಹೆನಾನ್ ಪ್ರಾಂತ್ಯದಲ್ಲಿ ನಡೆದ ಈ ಘಟನೆಯಲ್ಲಿ, ಮದುವೆಗೂ ಮುನ್ನ ಗೆಳೆಯನನ್ನು “ಪರೀಕ್ಷಿಸಲು” ಯುವತಿ ಬಯಸಿದ್ದಳು. ಹೆರಿಗೆ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವನ್ನು ಆತ ಅರ್ಥಮಾಡಿಕೊಳ್ಳಬೇಕು ಎಂದು ಆಕೆ ಬಯಸಿದ್ದಳು. ಇದಕ್ಕೆ ಆಕೆಯ ತಾಯಿ ಮತ್ತು ಸಹೋದರಿಯೂ ಬೆಂಬಲ ನೀಡಿದ್ದರು.

ಗೆಳತಿಯ ಬೇಡಿಕೆಗೆ ಒಪ್ಪಿದ ಯುವಕ, ಹೆರಿಗೆ ನೋವಿನ ಸಿಮ್ಯುಲೇಶನ್ ಗೆ ಒಳಗಾದ. ಈ ವೇಳೆ, ಹೆರಿಗೆ ನೋವಿನ ಅನುಭವ ನೀಡಲು ವಿದ್ಯುತ್ ಪ್ರವಾಹಗಳನ್ನು ಬಳಸಲಾಗಿತ್ತು. ಮೂರು ಗಂಟೆಗಳ ಕಾಲ ಈ ಸಿಮ್ಯುಲೇಶನ್ ಗೆ ಒಳಗಾದ ಯುವಕ, ನೋವಿನಿಂದ ನರಳಾಡಿದ್ದಾನೆ.

ಸಿಮ್ಯುಲೇಶನ್ ಮುಗಿದ ಬಳಿಕ ಯುವಕನಿಗೆ ಹೊಟ್ಟೆ ನೋವು ಮತ್ತು ವಾಂತಿ ಶುರುವಾಯಿತು. ಒಂದು ವಾರದ ಬಳಿಕ ಆತನ ಸ್ಥಿತಿ ಗಂಭೀರವಾಯಿತು. ವೈದ್ಯರು ಆತನ ಸಣ್ಣ ಕರುಳಿಗೆ ಹಾನಿಯಾಗಿದೆ ಎಂದು ತಿಳಿಸಿದರು. ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಈ ಘಟನೆಯಿಂದ ಯುವಕನ ತಾಯಿ ಕೋಪಗೊಂಡಿದ್ದಾರೆ. ಅವರು ಆತನ ಗೆಳತಿಯನ್ನು ಭೇಟಿಯಾಗುವುದನ್ನು ನಿಷೇಧಿಸಿದ್ದಾರೆ. ಅಲ್ಲದೆ, ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದಾರೆ ಮತ್ತು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಯುವಕನ ಗೆಳತಿ, ಆತ ಗುಣಮುಖನಾದರೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದ್ದಾಳೆ. ವೈದ್ಯಕೀಯ ವರದಿಗಳ ಪ್ರಕಾರ, ಸಿಮ್ಯುಲೇಶನ್ ನಿಂದ ಯುವಕನಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿ ಸಾಬೀತು ಮಾಡಲು ಇಂತಹ ಪರೀಕ್ಷೆಗಳ ಅಗತ್ಯವಿದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read