ಶಿಶುವಿಹಾರದ ಮಕ್ಕಳಿಗೆ ವಿಷವುಣಿಸಿದ ಶಿಕ್ಷಕಿಯನ್ನು ಗಲ್ಲಿಗೇರಿಸಿದ ಚೀನಾ ನ್ಯಾಯಾಲಯ !

ಚೀನಾದಲ್ಲಿ ಶಿಶುವಿಹಾರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬಳು ತನ್ನ ಸಹೋದ್ಯೋಗಿ ಜೊತೆಯಲ್ಲಿ ಜಗಳವಾಡಿದ್ದು ಈ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಬರೋಬ್ಬರಿ 25 ಮಕ್ಕಳಿಗೆ ವಿಷವುಣಿಸಿದ್ದಾಳೆ. ಅಲ್ಲದೇ ಒಬ್ಬರನ್ನು ಈಕೆ ಹತ್ಯೆಗೈದಿದ್ದಾಳೆ ಎನ್ನಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಜಿಯಾಝುವೊದಲ್ಲಿನ ಮೆಂಗ್​ಮೆಂಗ್​ ಪ್ರೀ ಸ್ಕೂಲ್​ ಶಿಕ್ಷಣದ ಯುವ ವಿದ್ಯಾರ್ಥಿಗಳಿಗೆ ವಿಷ ನೀಡಿದ ಆರೋಪದ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ 39 ವರ್ಷದ ವಾಂಗ್​ಯುನ್​ ಎಂಬಾಕೆಗೆ ಮರಣದಂಡನೆ ವಿಧಿಸಲಾಗಿದೆ.

“ಸಹೋದ್ಯೋಗಿಯೊಂದಿಗೆ ಜಗಳವಾಡಿದ ನಂತರ ಸೇಡು ತೀರಿಸಿಕೊಳ್ಳಲು” ವಾಂಗ್ ತನ್ನ ಸಹೋದ್ಯೋಗಿಯ ವಿದ್ಯಾರ್ಥಿಗಳ ಉಪಹಾರವನ್ನು ಸೋಡಿಯಂ ನೈಟ್ರೈಟ್‌ನೊಂದಿಗೆ ಕಲಬೆರಕೆ ಮಾಡಿದ್ದಾಳೆ ಎಂದು ಸ್ಥಳೀಯ ಅಧಿಕಾರಿಗಳು ಆ ಸಮಯದಲ್ಲಿ ತಿಳಿಸಿದ್ದಾರೆ.

ಶಿಕ್ಷಕಿಯು ತನ್ನ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೆನಾನ್ ಪ್ರಾಂತ್ಯದ ಜಿಯಾಜುವೋ ನಗರದ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ನೀಡಿತ್ತು. ಆಕೆಯನ್ನು ಗಲ್ಲಿಗೇರಿಸಲಾಗಿದೆ ಎಂದು ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read