ಚಿಕ್ಕಬಳ್ಳಾಪುರ: ಯುವಕನೊಬ್ಬ ಸ್ವಂತ ಚಿಕ್ಕಪ್ಪನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದ ಚೋಳಶೆಟ್ಟಿಗ್ರಾಮದಲ್ಲಿ ನಡೆದಿದೆ.
ರಾಮಕೃಷ್ಣಪ್ಪ ಕೊಲೆಯಾದ ವ್ಯಕ್ತಿ. ಎಂದಿನಂತೆ ಗ್ರಾಮದ ಹಾಲಿನ ಡೈರಿಗೆ ರಾಮಕೃಷ್ಣಪ್ಪ ಹಾಲು ಹಾಕಲು ಬಂದಿದ್ದರು. ಈ ವೇಳೆ ನಾಗರಾಜ್ ಎಂಬ ಯುವಕ ಚಿಕ್ಕಪ್ಪನನ್ನೇ ಕೊಲೆಗೈದು ಎಸ್ಕೇಪ್ ಆಗಿದ್ದಾನೆ.
ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ ಪಿ ಡಿ.ಎಲ್.ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ಆರೋಪಿ ನಾಗರಾಜ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.