alex Certify BIG NEWS: ಕೋಳಿ ವಾಹನ ಪಲ್ಟಿ; 600ಕ್ಕೂ ಹೆಚ್ಚು ಕೋಳಿಗಳು ಸಾವು; ಪುಕ್ಸಟ್ಟೆ ಕೋಳಿಗಾಗಿ ಮುಗಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋಳಿ ವಾಹನ ಪಲ್ಟಿ; 600ಕ್ಕೂ ಹೆಚ್ಚು ಕೋಳಿಗಳು ಸಾವು; ಪುಕ್ಸಟ್ಟೆ ಕೋಳಿಗಾಗಿ ಮುಗಿಬಿದ್ದ ಜನ

ಮೈಸೂರು: ಕೋಳಿ ಸಾಗಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಉದ್ಬೂರು ಕಾಲೋನಿ ಬಳಿ ನಡೆದಿದೆ.

ವಾಹನದ ಕೆಳಗೆ ಸಿಲುಕಿ 600ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ. ಈ ನಡುವೆ ಕೋಳಿ ವಾಹನ ಪಲ್ಟಿಯಾಗಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಜನರು ಪುಕ್ಸಟ್ಟೆ ಕೋಳಿಗಾಗಿ ಮುಗಿಬಿದ್ದಿದ್ದಾರೆ.

ನೂರಾರು ಜನರು ಕೋಳಿಗಳನ್ನು ಎತ್ತಿಕೊಂಡು ಹೊಗುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕೋಳಿ ವಾಹನ ಪಲ್ಟಿಯಾಗಿ ಬಿದ್ದಿದೆ.

ರಾಮಕೃಷ್ಣ ನಾಯ್ಡು ಕೋಳಿ ಫಾರಂ ಗೆ ಸೇರಿದ ಕೋಳಿಗಳಾಗಿದ್ದವು. ಕೋಳಿ ವಾಹನ ಅಪಘಾತದಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...