ಮೃತ ಸಂಗಾತಿ ದೇಹದೊಂದಿಗೆ ಮನೆಯಲ್ಲೇ ಎರಡು ದಿನ ಕಳೆದ ಪುರುಷ

ಲಿವಿಂಗ್-ಇನ್ ಸಂಗಾತಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ 30 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಘಟನೆ ಛತ್ತೀಸ್‌ಘಡದ ರಾಜಧಾನಿ ರಾಯ್ಪುರದಲ್ಲಿ ಜರುಗಿದೆ.

ಮೃತಳ ಸಂಗಾತಿ ಆಕೆಯ ದೇಹವನ್ನು ಮನೆಯಲ್ಲೇ ಇಟ್ಟುಕೊಂಡು ಎರಡು ದಿನ ಕಳೆದಿರುವ ಶಾಕಿಂಗ್ ಸಂಗತಿ ಬೆಳಕಿಗೆ ಬಂದಿದೆ. ತನಗೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲು ಧೈರ್ಯ ಬರಲಿಲ್ಲ ಎಂದ ಈತ, ಒಮ್ಮೆ ಮಾತ್ರ ಆಹಾರಕ್ಕೆಂದು ಕೋಣೆಯಿಂದ ಹೊರ ಬಂದಿದ್ದಾಗಿ ತಿಳಿಸಿದ್ದಾರೆ.

ತಮ್ಮ ನಡುವೆ ಯಾವುದೋ ಒಂದು ವಿಚಾರಕ್ಕೆ ಜಗಳವಾಗಿದ್ದಾಗಿ ತಿಳಿಸಿರುವ ಮೃತಳ ಸಂಗಾತಿ ಗೋಪಿ ನಿಶದ್, ಜಗಳವಾದ ಬಳಿಕ ತಾನು ಹೋಗಿ ಮಲಗಿದ್ದಾಗಿ ಹೇಳಿಕೊಂಡಿದ್ದಾರೆ. ನಿದ್ರೆಯಿಂದ ಎದ್ದು ನೋಡಿದ ಸಂದರ್ಭ ಆತನ ಸಂಗಾತಿ ಬಸಂತಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿರುವುದಾಗಿ ಗೋಪಿ ಹೇಳಿಕೊಂಡಿದ್ದಾರೆ.

ತನ್ನ ಸಂಗಾತಿ ಈ ವಿಪರೀತದ ನಡೆಗೆ ಮುಂದಾಗಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಆಕೆಯ ದೇಹವನ್ನು ಕೆಳಗಿಳಿಸಿದ್ದಾಗಿ ಗೋಪಿ ತಿಳಿಸಿದ್ದಾರೆ.

ಮನೆಯು ಒಳಗಿಂದ ಬೀಗ ಹಾಕಲಾಗಿದ್ದರೂ ಸಹ ಕೊಳೆತ ದೇಹದ ವಾಸನೆ ರಾಚುತ್ತಿದ್ದ ಕಾರಣ ಅಕ್ಕಪಕ್ಕದ ಮಂದಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಕೆಲಸ ಕಳೆದುಕೊಂಡಿದ್ದ ಗೋಪಿ ತನ್ನ ಕುಡಿತದ ಚಟದ ಕಾರಣ ಬೈಸಿಕಲ್ ಹಾಗೂ ಗ್ಯಾಸ್ ಸಿಲಿಂಡರ್‌ ಮಾರಿಕೊಂಡ ವಿಚಾರವಾಗಿ ತನ್ನ ಸಂಗಾತಿಯೊಂದಿಗೆ ಕಚ್ಚಾಡಿಕೊಂಡಿದ್ದರು. ಮೃತರ ದೇಹದಲ್ಲಿ ಹಲ್ಲೆ ಮಾಡಿರುವ ಗುರುತುಗಳಿದ್ದು ಆಕೆಯ ಸಾವಿಗೂ ಮುನ್ನ ದೈಹಿಕ ಹಲ್ಲೆ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಗೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಯಾವುದೇ ಸಂದರ್ಭದಲ್ಲೂ ಆತನನ್ನು ಬಂಧಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read