ಬೆಂಗಳೂರು: ಈ ವರ್ಷ ಶಾಲಾ ಪಠ್ಯಪುಸ್ತಕಗಳನ್ನು ಸಂಪೂರ್ಣವಾಗಿ ಪರಿಷ್ಕರಿಸುವುದಿಲ್ಲ. ಈ ವರ್ಷ ಕೆಲ ವಿವಾದಿತ ಪಠ್ಯ ವಿಷಯಗಳನ್ನು ಪಟ್ಟಿ ಮಾಡಿ ಅವುಗಳನ್ನು ಬೋಧನೆ ಮಾಡಿದಂತೆ ಸುತ್ತೋಲೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ವೇಳೆ ಪಠ್ಯ ಪರಿಷ್ಕರಣೆ ಕುರಿತ ವಿಚಾರ ಚರ್ಚೆಗೆ ಬಂದಿದೆ.
ಈ ವೇಳೆ ಸಿಎಂ ಮಾಹಿತಿ ನೀಡಿದ್ದು, ಮುಂದಿನ ವರ್ಷ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗುವುದು. 2023 -24 ನೇ ಸಾಲಿನ ಪಠ್ಯಪುಸ್ತಕಗಳ ಮುದ್ರಣವಾಗಿ ಶಾಲೆಗಳಿಗೆ ಪೂರೈಕೆಯಾಗಿದೆ. ಅವುಗಳನ್ನು ವಾಪಸ್ ಪಡೆದು ಪಠ್ಯ ಪರಿಷ್ಕರಿಸಿ ಮಕ್ಕಳಿಗೆ ನೀಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಈ ವರ್ಷ ಸಂಪೂರ್ಣ ಪಠ್ಯಪುಷ್ಕರಿಸುವುದಿಲ್ಲ. ವಿವಾದಿತ ಪಠ್ಯ ವಿಷಯಗಳನ್ನು ಮಕ್ಕಳಿಗೆ ಬೋಧನೆ ಮಾಡಿದಂತೆ ಶಿಕ್ಷಕರಿಗೆ ಸುತ್ತೋಲೆ ಹೊರಡಿಸಲಾಗುವುದು. ಮುಂದಿನ ವರ್ಷ ಸಮಗ್ರ ಪಠ್ಯ ಪರಿಷ್ಕರಣೆಗೆ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ.