ಧೈರ್ಯವಿದ್ದರೆ ಗುಂಡು ಹಾರಿಸು ಎಂದ ಸೋದರಳಿಯ; ಹೇಳಿದಂತೆ ಮಾಡಿದ ವೃದ್ದ

ರಾಜಸ್ಥಾನದ ಅಜ್ಮೀರ್‌ನಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಯೋವೃದ್ಧನೊಬ್ಬ ತನ್ನ ಸೋದರಳಿಯನ ಮೇಲೆ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭಾಗಾ ಎಂದು ಗುರುತಿಸಲಾದ ಆರೋಪಿ ತನ್ನ ಸೋದರಳಿಯನ ಖಾಸಗಿ ಭಾಗದ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ಜಿಲ್ಲೆಯ ಬೇವಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ತನ್ನ ಸೋದರಳಿಯ ಮೇಲೆ ಗುಂಡು ಹಾರಿಸುವುದಾಗಿ ಸವಾಲು ಹಾಕಿದ ನಂತರ ಆರೋಪಿಯು ಆತನ ಮೇಲೆ ಗುಂಡು ಹಾರಿಸಿದ್ದಾನೆ. ಗಾಯಾಳು, ಹಮೀದ್ ಅಲಿಯಾಸ್ ಮೆಹಬೂಬ್ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಮೀದ್ ಅವರ ಜಮೀನಿನಲ್ಲಿ ಅನುಮತಿಯಿಲ್ಲದೆ ಭಾಗಾ ಮಣ್ಣನ್ನು ತೆಗೆದಾಗ ಜಗಳ ಪ್ರಾರಂಭವಾಗಿದೆ. ಇಬ್ಬರ ನಡುವೆ ವಾಗ್ವಾದ ನಡೆಯುತ್ತಿರುವುದು ಕಂಡು ಬಂತು.

ಆಗ ಹಮೀದ್, ಭಾಗಾಗೆ ಗುಂಡು ಹಾರಿಸುವ ಧೈರ್ಯವಿದ್ದರೆ ಹಾರಿಸು ಎಂದು ಸವಾಲು ಹಾಕಿದಾಗ ಭಾಗಾ ಬಂದೂಕು ಚಲಾಯಿಸಿದ್ದಾನೆ, ಮಾತ್ರವಲ್ಲದೇ ಗುಂಡನ್ನೂ ಹಾರಿಸಿದ್ದಾನೆ.

https://twitter.com/HateDetectors/status/1629070633077473280?ref_src=twsrc%5Etfw%7Ctwcamp%5Etweetembed%7Ctwterm%5E1629070633077473280%7Ctwgr%5E64fc3ed59b547c9f3d36bec8cce1a7f28c69cc9a%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-man-bhaga-shoots-nephew-hameed-in-private-parts-over-land-dispute-in-rajasthan-watch-video-5915594%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read