ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವತಿಯಿಂದ ಬುಧವಾರ ಮಧ್ಯಾಹ್ನ ಪ್ರಕಟಿಸಬೇಕಿದ್ದ ಸಿಇಟಿ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಆಗಸ್ಟ್ 9ರಂದು ಸಂಜೆ 6 ಗಂಟೆಗೆ ಪ್ರಕಟಿಸಲು ನಿರ್ಧರಿಸಲಾಗಿದೆ.
ವಿದ್ಯಾರ್ಥಿಗಳ ಅನಕೂಲಕ್ಕಾಗಿ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಕೇವಲ ವಿದ್ಯಾರ್ಥಿಗಳ ಮಾಹಿತಿಗೆ ಮಾತ್ರ ಪ್ರಕಟಿಸಲಾಗುವುದು. ಇದು ನೈಜವಲ್ಲ, ಇಲ್ಲಿ ಸಿಗುವ ಕಾಲೇಜುಗಳು ನೈಜ ಫಲಿತಾಂಶದಲ್ಲಿ ಸಿಗದಿರುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಇದು ಕೇವಲ ಅಣಕು ಫಲಿತಾಂಶವಾಗಿರುತ್ತದೆ ಎಂದು ಹೇಳಲಾಗಿದೆ.
ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ https://cetonline.karnataka.gov.in/kea/ ವೆಬ್ಸೈಟ್ ಗಮನಿಸಬಹುದಾಗಿದೆ.