VIDEO | ಶಾಲಾ ಸಮವಸ್ತ್ರದಲ್ಲಿಯೇ ಸ್ಕೂಟಿ ಕದ್ದು ಬಾಲಕಿ ಪರಾರಿ; ಹಾಡಹಗಲೇ ನಡೆದ ಕೃತ್ಯ ಕಂಡು ಬೆಚ್ಚಿಬಿದ್ದ ಜನ

ಉತ್ತರಪ್ರದೇಶದ ವಾರಣಾಸಿಯ ದುರ್ಗಕುಂಡದಲ್ಲಿ ಇತ್ತೀಚಿಗೆ ನಡೆದ ಸ್ಕೂಟರ್ ಕಳ್ಳತನದ ವಿಡಿಯೋವೊಂದು ಅಲ್ಲಿನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಶಾಲಾ ಸಮವಸ್ತ್ರದಲ್ಲಿದ್ದ ಇಬ್ಬರು ಹದಿಹರೆಯದ ಹುಡುಗಿಯರು ಸೋಮವಾರ ಅಪಾರ್ಟ್‌ಮೆಂಟ್‌ನ ಕೆಳಗೆ ನಿಲ್ಲಿಸಿದ್ದ ಸ್ಕೂಟರ್ ಅನ್ನು ಕದ್ದಿದ್ದು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.

ವರದಿಗಳ ಪ್ರಕಾರ ಹುಡುಗಿಯರಲ್ಲಿ ಒಬ್ಬಳು ಅಪಾರ್ಟ್ ಮೆಂಟ್ ನಲ್ಲಿ ವಾಸಿಸುವ ಮಹಿಳೆಯನ್ನು ಸಂಪರ್ಕಿಸಿ ಸ್ಕೂಟರ್ ಕೀ ಕೇಳಿದ್ದಾಳೆ. ಗಾಡಿಯನ್ನು ಪಕ್ಕಕ್ಕೆ ಸರಿಸಿ ನಿಲ್ಲಿಸಲು ಕೀ ಕೇಳುತ್ತಿರಬಹುದೆಂದು ಭಾವಿಸಿದ ಮಹಿಳೆ ಬಾಲಕಿಯರು ಶಾಲಾ ಸಮವಸ್ರ್ದದಲ್ಲಿದ್ದರಿಂದ ಯಾವುದೇ ಅನುಮಾನವಿಲ್ಲದೆ ಕೀ ನೀಡಿದ್ದಾರೆ.

ಕೀ ಕೈಗೆತ್ತಿಕೊಂಡ ನಂತರ ಹುಡುಗಿ ಸ್ಕೂಟರ್ ಸ್ಟಾರ್ಟ್ ಮಾಡಿ ಯಾವುದೇ ಅನುಮಾನ ಬಾರದಂತೆ ಪರಾರಿಯಾಗಿದ್ದಾಳೆ.
ಈ ಘಟನೆ ನೋಡಿದ ನೆಟ್ಟಿಗರು ಅಭಯ್ ಡಿಯೋಲ್ ಅಭಿನಯದ ಚಿತ್ರ “ಓಯ್ ಲಕ್ಕಿ! ಲಕ್ಕಿ ಓಯ್!” ಎಂದು ಟೀಕಿಸಿದ್ದಾರೆ.
ವರದಿಗಳ ಪ್ರಕಾರ ಸಂತ್ರಸ್ತೆ ಸಾರಿಕಾ ಸಿಂಗ್ 20 ನಿಮಿಷದ ಬಳಿಕವೂ ಗಾಡಿ ಕೀ ಹಿಂದಿರುಗಿಸಲು ಬಾಲಕಿಯರು ಬರದಿದ್ದಾಗ ಅನುಮಾನಗೊಂಡು ಬೇಲುಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read